ಕೂಗು ನಿಮ್ಮದು ಧ್ವನಿ ನಮ್ಮದು

ಇವತ್ತು ಜೆಡಿಎಸ್ ಶಾಸಕರಿಂದ KRS ಡ್ಯಾಮ್ಗೆ ದೃಷ್ಟಿ ಪೂಜೆಯನ್ನು ಮಾಡಲಾಯಿತು.

ಮಂಡ್ಯ: JDS ಶಾಸಕರು ಇವತ್ತು KRS ಡ್ಯಾಮ್ಗೆ ದೃಷ್ಟಿ ಪೂಜೆಯನ್ನು ಆಯೋಜಿಸಿದ್ರು, ಇನ್ನೂ ಡ್ಯಾಂ ಬಿರುಕು ವಿಚಾರವಾಗಿ ನಡೆಯುತ್ತಿರುವ ಆರೋಪ, ಪ್ರತ್ಯಾರೋಪದ ಹಿನ್ನೆಲೆಯಲ್ಲಿ JDS ಶಾಸಕರು ಇವತ್ತು KRS ಡ್ಯಾಮ್ನ ಕಾವೇರಿ ಪ್ರತಿಮೆಯ ಹತ್ತಿರ ದೃಷ್ಟಿ ನಿವಾರಣೆಯ ಪೂಜೆಯನ್ನು ಹಮ್ಮಿಕೊಂಡಿದ್ರು.

ಜೊತೆಗೆ ಖ್ಯಾತ ಜ್ಯೋತಿಷ್ಯರಾದ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದ ಅನುಸಾರದಲ್ಲಿ ಈ ಪೂಜೆಯನ್ನು ಮುಂಜಾನೆ ೯ ಗಂಟೆಗೆ ಆರಂಭಿಸಿದರು. ಜೊತೆಗೆ ಹೋಮ, ಹವನಗಳ ಮೂಲಕ ಡ್ಯಾಮ್ಗೆ ಆಗಿರುವ ದೃಷ್ಟಿಯನ್ನು ನಿವಾರಣೆ ಮಾಡಲು JDS ಶಾಸಕರು ಮುಂದಾದ್ರು, ಇನ್ನೂ ಈ ಹಿಂದೆಯೂ ಸಹ ಶಾಸಕ ರವೀಂದ್ರ ಶ್ರೀಕಂಠಯ್ಯನವರು KRS ಡ್ಯಾಮ್ಗೆ ದೃಷ್ಟಿ ಆಗಿದೆ ಎಂದಿದ್ರು. ಜೊತೆಗೆ ಸಂಸದೆ ಸುಮಲತಾ ಅವರು ಇತ್ತೀಚೆಗೆ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿಕೆಯನ್ನು ಸಹ ಕೋಟ್ಟಿದ್ರು. ಇನ್ನೂ ಇದಾದ ನಂತರ KRS ಡ್ಯಾಂ ನಲ್ಲಿ ಮೆಟ್ಟಿಲುಗಳ ಗೋಡೆಗಳ ಕುಸಿತ ಶುರುವಾಯಿತು.

error: Content is protected !!