ಕೂಗು ನಿಮ್ಮದು ಧ್ವನಿ ನಮ್ಮದು

ಇವತ್ತು ಕ್ಲೈಮ್ಯಾಕ್ಸ್ – ಸಿಎಂ ಬಿ.ಎಸ್‍ ಯಡಿಯೂರಪ್ಪ, ಇಂದಿನ ಪ್ರೋಗ್ರಾಮ್ ಏನು?

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಇವತ್ತು ಬಹು ಮುಖ್ಯ ದಿನ ಎಕೆಂದರೆ ರಾಜೀನಾಮೆ ಗೊಂದಲಕ್ಕೆ ಇವತ್ತು ತೆರೆ ಬೀಳಲಿದೆ. ಹೀಗಾಗಿ ಇವತ್ತಿನ ಪ್ರೋಗ್ರಾಮ್ ಏನ್ ಏನು? ಇನ್ನೂ ಮುಂಜಾನೆ ೯.೫೦ ರ ಸಮಯಕ್ಕೆ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪನವರು ಇಂದು ಭಾಗವಹಿಸಲಿದ್ದಾರೆ. ನಂತರ ಸರ್ಕಾರದ ೨ ವರ್ಷ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಮುಂಜಾನೆ ೧೧ ಗಂಟೆಯಿಂದ ಹಿಡಿದು ಮಧ್ಯಾಹ್ನ ೧ ಗಂಟೆ ವರೆಗೂ ಸಮಾವೇಶ ನಡೆಯಲಿದ್ದು, ಇನ್ನೂ ಈ ಸಮಾವೇಶದಲ್ಲಿ ಸರ್ಕಾರದ ೨ ವರ್ಷದ ಸಾಧನೆಗಳ ಕೈಪಿಡಿಯು ಬಿಡುಗಡೆಯಾಗಲಿದೆ.

ಜೊತೆಗೆ ಈ ಸಮಾರಂಭವನ್ನು ಉದ್ದೇಶಿಸಿ ಮುಖ್ಯಮಂತ್ರಿ ಭಾಷಣ ಮಾಡಲಿದ್ದಾರೆ. ಜೊತೆಗೆ ಇದೇ ವಿದಾಯ ಭಾಷಣವಾಗುವ ಸಾಧ್ಯತೆಯು ದಟ್ಟವಾಗಿದೆ. ಇನ್ನೂ ಮಧ್ಯಾಹ್ನ ೧ ಗಂಟೆ ನಂತರ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಭಾಗಿಯಾಗುತ್ತಾರೆ. ಜೊತೆಗೆ ಮಧ್ಯಾಹ್ನ ೧.೩೦ ಕ್ಕೆ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ವಾಪಸ್ ಅಗಲಿದ್ದಾರೆ. ಇನ್ನೂ ಸದನದಲ್ಲಿ ಮುಂದಿನ ನಡೆಯ ಬಗ್ಗೆ ಅಂತಿಮ ತಿರ್ಮಾನದ ಚರ್ಚೆಗಳ, ಸಮಾಲೋಚನೆ ಮಾಡಿ ಬಳಿಕ ಮಧ್ಯಾಹ್ನ ೩ ಗಂಟೆ ನಂತರ ರಾಜ ಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಇನ್ನೂ ಸಿಎಂ ರಾಜ್ಯಪಾಲರನ್ನು ಭೇಟಿ ಮಾಡುವ ವರೆಗೂ ಹೈಕಮಾಂಡ್ ಸಂದೇಶಕ್ಕಾಗಿ ಬಿ.ಎಸ್ ಯಡಿಯೂರಪ್ಪನವರು ಕಾಯಲಿದ್ದಾರೆ.

error: Content is protected !!