ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ೨, ೩ ತಿಂಗಳಲ್ಲಿ ಆರು ಕೋಟಿ ಜನರಿಗೆ ಕೋರೊನಾ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದಂತ ಕೆ.ಸುಧಾಕರ್ ಅವರು ಹೇಳಿದ್ದಾರೆ. ಜೊತೆಗೆ MPL ಸಂಸ್ಥೆಯಿಂದ ಉಚಿತವಾಗಿ ಕೋರೊನಾ ಲಸಿಕೆಯನ್ನು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಡಾ.ಕೆ. ಸುಧಾಕರ್ ಅವರು, ದೇಶದಲ್ಲಿ ಕೋರೊನಾ ಲಸಿಕೆಯ ಬಗ್ಗೆ ಹಲವು ಪಕ್ಷಗಳು ಭಯ ಪಟ್ಟವು. ಆದರೆ ಜನರಿಗೆ ಇತ್ತೀಚಿನ ದಿನಗಳಲ್ಲಿ ಕೋರೊನಾ ರೋಗದ ಬಗ್ಗೆ ಅರ್ಥವಾಗಿದೆ. ಇನ್ನೂ ಕೋವಿಡ್ ಲಸಿಕೆಯನ್ನು ಪಡೆದುಕೊಂಡವರಿಗೆ ಕೊರೊನಾ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗಿದೆ.
ಹೀಗಾಗಿ ಇಡೀ ರಾಜ್ಯದಲ್ಲಿ ೨,೩ ತಿಂಗಳಲ್ಲಿ ೫,೬ ಕೋಟಿ ಜನರಿಗೆ ಲಸಿಕೆಯನ್ನು ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ. ಇನ್ನೂ MPL ಸಂಸ್ಥೆ ಮೊದಲ ಕಂತಿನಲ್ಲಿ ೨,೫೦೦ ಲಸಿಕೆಯನ್ನು ನೀಡಿದೆ. ಜೊತೆಗೆ ನಗರಕ್ಕೆ ೨,೦೦೦ ರಿಂದ ೫೦೦ ಮಂಚೇನಹಳ್ಳಿ ಭಾಗಕ್ಕೆ ಲಸಿಕೆಯನ್ನು ನೀಡಿದೆ. ಇನ್ನೂ ರಾಜ್ಯಕ್ಕೆ ಇದು ವರೆಗೂ ಒಂದು ಲಕ್ಷ ಲಸಿಕೆಯನ್ನು ಸಂಸ್ಥೆಯೂ ಈ ವರೆಗೂ ನೀಡಿದೆ. ಇನ್ನೂ ಶೇಕಡಾ ೨೫ ರಷ್ಟು ಲಸಿಕೆಯನ್ನು ಖಾಸಗಿ ವಲಯಕ್ಕೆ ಮೀಸಲಿಡಲಾಗಿದೆ. ಈ ಲಸಿಕೆಯನ್ನು ಸಂಸ್ಥೆಗಳು ಮುಂದೆ ಬಂದು ಖರೀದಿ ಮಾಡಿ ಜನರಿಗೆ ಉಚಿತವಾಗಿ ನೀಡಬೇಕೆಂದು ಕೆ.ಸುಧಾಕರ್ ಅವರು ಮನವಿ ಮಾಡಿದ್ರು.
ಕಾಳಜಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಲಾಗಿದ್ದು, ಜೊತೆಗೆ ಮೊಬೈಲ್ ಕ್ಲಿನಿಕ್ ಗಳನ್ನೂ ಕಳುಹಿಸಲಾಗಿದೆ ಎಂದಿದ್ದಾರೆ. ಇನ್ನೂ ಮಳೆಗಾಲದಲ್ಲಿ ನೀರಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಕೋರೊನಾ ಕಡಿಮೆ ಆಗುತ್ತಿದ್ದಂತೆ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಯಿತು. ಇನ್ನೂ ನಂದಿ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಲಾಗುತ್ತದೆ. ಜೊತೆಗೆ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಬಳಿ ವೃಷಭಾವತಿಯಿಂದ ನೀರು ತರುವ ಯೋಜನೆಯನ್ನು ರೂಪಿಸಲಾಯಿತು.
ಇದರಿಂದ ೫೦ ಕೆರೆಗಳಿಗೆ ನೀರು ತುಂಬಿಸಲಾಗುವುದು. ಜೊತೆಗೆ ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇನ್ನೂ ಕೃಷಿಗೆ ಹೊಂದಿಕೊಂಡ ಕೈಗಾರಿಕೆಯನ್ನು ಸ್ಥಾಪಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಬೇಕಾದಷ್ಟು ಜಮೀನನ್ನು ಗುರುತಿಸಲಾಗುವುದು ಎಂದು ಮಾಹಿತಿಯನ್ನು ನೀಡಿದ್ರು. ಜೊತೆಗೆ
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಒಳ್ಳೆಯ ಬೆಳೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಶೇಕಡಾ ೧೫೦ ರಷ್ಟು ರಸಗೊಬ್ಬರ ಸಬ್ಸಿಡಿ ನೀಡಿದ್ದಾರೆ. ಆದ್ರು ವಿರೋಧಿಗಳು ಏನೂ ಮಾಡಿಲ್ಲವೆಂದು ಟೀಕೆ ಮಾಡುತ್ತಾರೆ. ಇನ್ನೂ ಪರೀಕ್ಷೆ, ಆಂಬ್ಯುಲೆನ್ಸ್, ಕೋವಿಡ್ ಕೇರ್ ಸೆಂಟರ್ ಎಲ್ಲವನ್ನೂ ಉಚಿತವಾಗಿ ನೀಡಲಾಗಿದೆ. ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿದ್ರೆ ೩ನೇ ಅಲೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.