ಕೂಗು ನಿಮ್ಮದು ಧ್ವನಿ ನಮ್ಮದು

ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ದೆಹಲಿಗೆ ತೇರಳಿದ ಸಚಿವ ನಿರಾಣಿ

ಬೆಂಗಳೂರು: ಹೈಕಮಾಂಡ್ ಸಂದೇಶಕ್ಕೂ ಮುಂಚಿತವಾಗಿ ರಾಜ್ಯ ರಾಜಕೀಯದಲ್ಲಿ ಡಿಢೀರ್ ಬೆಳವಣಿಗೆ ನಡೆದಿದೆ, ಸಚಿವ ಮುರುಗೇಶ್ ನಿರಾಣಿಯವರು ದೆಹಲಿಗೆ ಹೋಗಿದ್ದಾರೆ. ಇವತ್ತು ಮಧ್ಯಾಹ್ನ ಮೂರು ಗಂಟೆ ಸರಿ ಸುಮಾರಿಗೆ ನಿರಾಣಿಯವರು ದೆಹಲಿ ತಲುಪಿದ್ದಾರೆ. ಈ ಮೂಲಕ ಬಿ.ಎಸ್ ಯಡಿಯೂರಪ್ಪನವರ ನಿರ್ಗಮನದ ಬೆನ್ನಲ್ಲೇ ನಿರಾಣಿಯವರ ಈ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಹೈಕಮಾಂಡ್ ಬುಲಾವ್ ಕೊಟ್ಟಿದೆಯಾ? ಅಥವಾ ನಿರಾಣಿಯವರು ಸ್ವಯಂ ದೆಹಲಿಗೆ ಹೊದ್ರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ. ಇದರ ಮಧ್ಯೆಯೇ ನಿರಾಣಿಯವರು ದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುವುದು ಅನುಮಾನವಿದೆ. ಎಕೆಂದರೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಗೋವಾದಲ್ಲಿದ್ದಾರೆ. ಇನ್ನೂ ಗೃಹ ಸಚಿವ ಅಮಿತ್ ಶಾ ಅವರು ಸಹ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದಾರೆ.

ಇನ್ನೂ RSS ನಾಯಕರ ಭೇಟಿ ಮಾಡುತ್ತಾರಾ..? ಅಥವಾ ತಡರಾತ್ರಿ ಹೈಕಮಾಂಡ್ ನಾಯಕರ ಭೇಟಿ ಮಾಡ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ತೀವ್ರ ಮನೆ ಮಾಡಿದೆ. ಒಟ್ಟಿನಲ್ಲಿ ಸಚಿವರ ಈ ಏಕಾಏಕಿ ದೆಹಲಿ ಭೇಟಿ ತೀವ್ರ ಕುತೂಹ ಹುಟ್ಟಿಸಿದ್ದು, ಕಡೆ ಕ್ಷಣದಲ್ಲಿ ಲಾಬಿಗಿಳಿದ್ರಾ ಅನ್ನೋ ಅನುಮಾನ ಎದ್ದಿದೆ. ಈ ಹಿಂದೆ ಸಿಎಂ ರೇಸ್ ನಲ್ಲಿ ಮುರುಗೇಶ್ ನಿರಾಣಿ ಹೆಸರು ಸಹ ಕೇಳಿ ಬಂದಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಸಚಿವರು, ನಾನು ಸಿಎಂ ರೇಸ್ ನಲ್ಲಿ ಇಲ್ಲ. ನಾನು ಸಿಎಂ ಆಕಾಂಕ್ಷಿನೇ ಅಲ್ಲವೇ ಅಲ್ಲ. ಸುದ್ದಿಗಾರರೇ ನನ್ನ ಹೆಸರನ್ನ ಹೇಳುತ್ತಿರುವುದು. ನಾನು ಪಕ್ಷದ ಶಿಸ್ತಿನ ಸಿಪಾಯಿ ಹೈಕಮಾಂಡ್ ನನಗೆ ಕೊಟ್ಟ ಜವಾಬ್ದಾರಿಯನ್ನ ನಾನು ಅಚ್ಚು ಕಟ್ಟಾಗಿ ನಿಭಾಯಿಸಿದ್ದೇನೆ. ಇದರ ಮಧ್ಯ ಯಡಿಯೂರಪ್ಪನವರೆ ಮುಂದಿನ ೨ ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ರು.

error: Content is protected !!