ಶಿವಮೊಗ್ಗ: ಹಲವು ಮಾಧ್ಯಮಗಳಲ್ಲಿ ನಾನೇ ಮುಂದಿನ ಸಿಎಂ ಎಂದು ಸುದ್ದಿಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ಈ ವಿಷಯವು ಅಪ್ರಸ್ತುತ. ಬಿ.ಎಸ್ ಯಡಿಯೂರಪ್ಪನವರೆ ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರಿದ್ರೆ ನಾನು ಬಹಳ ಸಂತೋಷ ಪಡುತ್ತೇನೆ ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಇನ್ನೂ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅರಗ ಜ್ಞಾನೇಂದ್ರ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವಾಗಲಿ, ಮಂತ್ರಿ ಸ್ಥಾನವಾಗಲಿ ಖಾಲಿ ಇಲ್ಲ. ಮುಖ್ಯಮಂತ್ರಿಯಾಗಿ ಬಿ.ಎಸ್.ವೈ ಅವರೆ ಅತ್ಯಂತ ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸುತ್ತಾರೆ.
ಹೀಗಾಗಿ ಬಿ.ಎಸ್.ವೈ ಅವರೆ ಮುಂದಿನ ಸಿಎಂ ಆಗಿ ಮುಂದುವರಿದ್ರೆ ನನಗೆ ಬಹಳ ಸಂತೋಷವಾಗುತ್ತದೆ ಎಂದಿದ್ದಾರೆ. ಇನ್ನೂ
ಯಡಿಯೂರಪ್ಪ ಅವರು ಕೋರೊನಾ ಸಮಯದಲ್ಲಿ, ಮತ್ತು ಪ್ರವಾಹ ಸಂದರ್ಭದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಇದು ವರೆಗೂ ಯಾವುದೇ ಮುಖ್ಯಮಂತ್ರಿ ಮಾಡದಂತಹ ಕೆಲಸವನ್ನು ಯಡಿಯೂರಪ್ಪನವರು ಮಾಡಿದ್ದಾರೆ. ಅಲ್ಲದೇ ಯಡಿಯೂರಪ್ಪನವರಿಗೆ ಬಹುಮತ ಬರದಿದ್ದರೂ ಸರ್ಕಾರವನ್ನು ರಚನೆ ಮಾಡುವ ಕೆಲಸವನ್ನು ಬಿ.ಎಸ್.ವೈ ಮಾತ್ರ ಮಾಡಲು ಸಾಧ್ಯ ಎಂದಿದ್ದಾರೆ. ಜೊತೆಗೆ ಯಡಿಯೂರಪ್ಪನವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.