ಕಫ-ಪಿತ್ತ-ಜ್ವರ:
ಕಫ-ಪಿತ್ತವನ್ನು ವೃದ್ಧಿಗೊಳಿಸುವ ಆಹಾರ-ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ, ದೇಹದಲ್ಲಿ ಕಫ-ಪಿತ್ತದ ಪ್ರಮಾಣ ಹೆಚ್ಚಾಗುತ್ತದೆ. ಇದರ ಪರಿಣಾಮ ಕಫ-ಪಿತ್ತ ಜ್ವರ ಉತ್ಪನ್ನವಾಗುತ್ತದೆ. ಈ ಜ್ವರದಲ್ಲಿ ಕಣ್ಣು ಮತ್ತು ಕೈ-ಕಾಲುಗಳಲ್ಲಿ ಉರಿ, ಅಧಿಕ ಬಾಯಾರಿಕೆ ನಾಲಿಗೆ ರುಚಿ ಕೆಡುವುದು, ಆಹಾರ ಸೇವನೆ ಇಚ್ಛೆಯಲ್ಲಿ ಕೊರತೆ; ದೇಹಕ್ಕೆ ಕೆಲವೊಮ್ಮೆ ಚಳಿ, ಕೆಲವೊಮ್ಮೆ ಉಷ್ಣದ ಅನುಭವ ಇತ್ಯಾದಿ ಲಕ್ಷಣಗಳು ತೋರಿಬರುತ್ತವೆ. ಈ ಜ್ವರ ದಿನದ ಮೂರನೆಯ ಪ್ರಹರ ಮತ್ತು ರಾತ್ರಿಯ ಕೊನೆಯ ಪ್ರಹರದಲ್ಲಿ ಸಾಮಾನ್ಯವಾಗಿ ಹೋಗುತ್ತದೆ. ನಾಡಿಯ ಗತಿ ಮಂದವಾಗುವುದು. ಈ ಜ್ವರದಲ್ಲಿ ಜೇನುತುಪ್ಪದಿಂದ ಈ ಕೆಳಗಿನ ಉಪಚಾರ ಮಾಡಿ.
೧) ಒಂದು ಚಮಚ ನಿಂಬೆ ಹಣ್ಣಿನ ತೊಗಟೆಯ ಚೂರ್ಣದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಿ.
೨) ತಿಭುವನ ಕೀರ್ತಿ ರಸದಲ್ಲಿ ಜೇನುತುಪ್ಪವನ್ನು ಬೆರೆಸಿ, ಪ್ರತಿಸಲ 3-3 ಗ್ರಾಮ ನಂತೆ ದಿನದಲ್ಲಿ ಮೂರು ಸಲ ಸೇವಿಸಿ.
೩) ಶುಂಠಿ, ಕೆಂಪು ಚಂದನ,ಗಿಲೋಯ ಮತ್ತುಪಡವಲ ಬಳ್ಳಿಯ ಎಲೆ ಇವೆಲ್ಲವುಗಳನ್ನು ಚೂರ್ಣ ಮಾಡಿ,3-3 ಗ್ರಾಮ್ ಚೂರ್ಣದೊಡನೆ ಜೇನುತುಪ್ಪ ಸೇರಿಸಿ ಸೇವಿಸಿ.
೪) ಜೇನುತುಪ್ಪದಲ್ಲಿ ಬೇವಿನ ಗಿಡದ ತೊಗಟೆಯ ಚೂರ್ಣ ಒಂದು ಚಮಚದಷ್ಟು ಸೇರಿಸಿ ಸೇವಿಸಿ.
೫) ಪಿತ್ತ ಪಾಪಡಾ, ಒಣ ಧನಿಯ ಮತ್ತು ಬೇವಿನ ಗಿಡದ ತೊಗಟೆ- ಇವೆಲ್ಲವುಗಳನ್ನು 3-3 ಗ್ರಾಮ ತೆಗೆದುಕೊಂಡು ಚೂರ್ಣ ಮಾಡಿ, ಜೇನುತುಪ್ಪ ಬೆರೆಸಿ ಬೆಳ್ಳಗೆ-ಸಾಯಂಕಾಲ ಸೇವಿಸಿ.