ಹಾವೇರಿ: ಖಾರದ ಪುಡಿ ಲಾಂಗ್, ಕ್ರಿಕಟ್ ಸ್ಟಂಪ್ ಹಿಡಿದು ದರೋಡೆಗೆ ಸಿದ್ದವಾಗಿದ್ದ ದುಷ್ಕರ್ಮಿಗಳ ಗುಂಪಿನ ಮೇಲೆ ಹಾನಗಲ್ ಪೊಲೀಸರ ದಾಳಿ ನಡೆಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಿನ ಜಾವ ಹಾನಗಲ್-ಶಿರಸಿ ಬಳಿಯ ನಾಲ್ಕರ ಕ್ರಾಸ್ ಬಳಿ ನಿಂತಿದ್ದ ದರೋಡೆಕೋರರು ಲಾಂಗ್, ಕ್ರಿಕೆಟ್ ಸ್ಟಂಪ್, ಕಾರದ ಪುಡಿ ಜೊತೆಗಿಟ್ಟುಕೊಂಡು ಅಟೊದಲ್ಲಿ ಹೊಂಚು ಹಾಕುತ್ತಿದ್ದಾಗ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ರಸ್ತೆಯಲ್ಲಿ ಅನುಮಾಸ್ಪದವಾಗಿ ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದನ್ನು ಕಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದ ವೇಳೆ ದರೋಡೆಗೆ ಸ್ಕೆಚ್ ಹಾಕಿರುವ ಬಗ್ಗೆ ಆರೋಪಗಳು ಒಪ್ಪಿಕೊಂಡಿದ್ದು, ಕೂಡಲೇ ಅನುಮಾನಗೊಂಡ ತಕ್ಷಣ ದಾಳಿ ಮಾಡಿ ನಾಲ್ವರನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತರಿಂದ ಒಂದು ಅಟೊರಿಕ್ಷಾ, ಮೋಟಾರ್ ಸೈಕಲ್, 02 ಕಬ್ಬಿಣದ ರಾಡ್, 02 ಚಾಕು, ಅರ್ಧ ಕೆ.ಜಿ ಖಾರದ ಪುಡಿ ಇವುಗಳನ್ನು ಜಪ್ತಿ ಮಾಡಲಾಗಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.