ಕೂಗು ನಿಮ್ಮದು ಧ್ವನಿ ನಮ್ಮದು

ಆಶ್ರಯ ಮನೆ ಕೇಳಿದ್ದಕ್ಕೆ ಮಂಚಕ್ಕೆ ಕರೆದ ಕಾರ್ಪೊರೇಷನ್ ಅಧಿಕಾರಿಗೆ ಸಖತ್ ಗೂಸಾ

ಮೈಸೂರು: ಆಶ್ರಯ ಮನೆ ಕೇಳಿದಕ್ಕೆ ಕಾರ್ಪೊರೇಷನ್ ಅಧಿಕಾರಿಯೊಬ್ಬ ಮಹಿಳೆಯನ್ನು ಮಂಚಕ್ಕೆ ಕರೆದ ತಲೆ ತಗ್ಗಿಸುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಕಾಮುಕ ಅಧಿಕಾರಿಗೆ ಮಹಿಳೆಯರು ಕಚೇರಿಗೆ ನುಗ್ಗಿ ಹಿಗ್ಗಾ-ಮುಗ್ಗಾ ಗೂಸಾ ನೀಡಿದ್ದಾರೆ.

ಕಾಮುಕ ಅಧಿಕಾರಿಗೆ ಥಳಿಸಿದ ವಿಡಿಯೋ

ಮೈಸೂರು ಶಾರದಾದೇವಿ ನಗರ ಪಾಲಿಕೆ ವಲಯ ಕಛೇರಿಯಲ್ಲಿ ಘಟನೆ ಈ ಘಟನೆ ನಡೆದಿದ್ದು, ವಿಷಕಂಟೇಗೌಡ ಎಂಬ ಅಧಿಕಾರಿ ಮಹಿಳೆಗೆ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ರೋಷಾವೇಶಗೊಂಡ ಮಹಿಳೆಯರು ಕಛೇರಿಗೆ ತೆರೆಳಿ ಕಾಮುಕ ಅಧಿಕಾರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇನ್ನು ಈ ಕಾಮುಕ ಅಧಿಕಾರಿ ಮಹಿಳೆಯನ್ನು ಮಂಚಕ್ಕೆ ಕರೆದ ಆಡಿಯೋ ವೈರಲ್ ಆಗಿದೆ.

ವಾಸ ಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಹಾಕಿದ ಮಹಿಳೆಗೆ ಕಾಲ್ ಮಾಡಿದ ಈ ಅಧಿಕಾರಿ ಮಹಿಳೆಯೊಂದಿಗೆ ಅಸಭ್ಯತೆ ತೋರಿದ್ದಲ್ಲದೇ ಮಂಚಕ್ಕೆ ಕರೆದಿದ್ದ. ಇಷ್ಟೆಲ್ಲಾ ನಡೆದ್ರು, ಕಚೇರಿಯಲ್ಲೇ ಗೂಸಾ ತಿಂದರೂ ಪಾಲಿಕೆ ಆಯುಕ್ತರು ಮಾತ್ರ ಈ ಆಸಾಮಿ ವಿರುದ್ದ ಕ್ರಮ ಕೈಗೊಂಡಿಲ್ಲ.

error: Content is protected !!