ಬೆಳಗಾವಿ: ಕೆರೆಗಳ ಅಭಿವೃಧ್ಧಿ ಮಾಡಿದರೇ ಮಾತ್ರ ಅಂತರ್ಜಲ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಬಂಜರು ಜಮೀನು ಹಸಿರಿನಿಂದ ಕಂಗೊಳಿಸಲಿವೆ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ. ಕೆರೆಗಳ ಅಭಿವೃದ್ಧಿ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಸಚಿವ ಉಮೇಶ ಕತ್ತಿ ಅವರು ಹುಕ್ಕೇರಿ ಮತ ಕ್ಷೇತ್ರದ 28 ಕೆರೆಗಳನ್ನ ಅಭಿವೃದ್ದಿ ಪಡಿಸಿದ್ದಾರೆ. ಅಷ್ಟೆ ಅಲ್ಲದೇ ಪ್ರತಿ ರವಿವಾರ ತಮ್ಮ ಎಲ್ಲ ಕಾರ್ಯಗಳನ್ನು ಬದಿಗಿಟ್ಟು 14 ಕೆರೆಗಳ ವೀಕ್ಷಣೆ ಮಾಡುತ್ತಾರೆ.
ಅಧಿಕಾರಿಗಳೊಂದಿಗೆ ವಿವಿಧ ಗ್ರಾಮಗಳಿಗೆ ತೆರಳಿ ಕೆರೆ ತುಂಬುವ ಯೋಜನೆ ಹಾಗೂ ಕೆರೆಗಳ ಅಭಿವೃದ್ಧಿ ಕುರಿತು ಮಾಹಿತಿ ಪಡೆಯುವದಷ್ಟೇ ಅಲ್ಲದೇ ಕೆರೆಗಳ ಅಭಿವೃದ್ಧಿಯಲ್ಲಿ ಯಾವುದೇ ಕುಂಠಿತವಾಗದಂತೆ ನಿಗಾವಹಿಸುತ್ತಾರೆ.
ಹೀರಣ್ಯಕೇಶಿ ನದಿಯಿಂದ ಬೃಹತ್ ಪೈಪ್ ಲೈನ್ ಮೂಲಕ ಕರೆಗಳಿಗೆ ನೀರು ತುಂಬಿಸುವ ಯೋಜನೆಯನ್ನ ಯಶಸ್ವಿಯಾಗಿ ಕಾರ್ಯಗತಗೊಳಿಸಿ ಕೆರಗಳಿಗೆ ನೀರು ತುಂಬಿಸಲಾಗುತ್ತಿದೆ. ಸದ್ಯ ಈಗ ಕೆರೆಗಳ ಸುತ್ತ ವನ ನಿರ್ಮಾಣ ಮಾಡಲು ಮುಂದಾಗಿರುವ ಸಚಿವ ಉಮೇಶ ಕತ್ತಿ ಕೆರಗಳ ಸುತ್ತ ಮರಗಳನ್ನ ನೆಡುಸುತ್ತಿದ್ದಾರೆ.