ಕೂಗು ನಿಮ್ಮದು ಧ್ವನಿ ನಮ್ಮದು

ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ನಡೆ-ನುಡಿ ನಮಗೆ ಸ್ಫೂರ್ತಿ” ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ: ಮುಂದೆ ಒಂದು ಗುರಿ ಇರಬೇಕು. ಹಿಂದೆ ಒಂದು ಗುರುಗಳ ಆಶೀರ್ವಾದ ಇರಬೇಕು. ಈ ಗುರುಗಳ ದಿವ್ಯಾ ಶೀರ್ವಾದದಿಂದ ಜೊಲ್ಲೆ ಉದ್ಯೋಗ ಸಮೂಹ ಹೆಮ್ಮರವಾಗಿ ಬೆಳೆದಿದೆ ಎಂದರು.

ಚಿಕ್ಕೋಡಿಯ ನಾಯಿಂಗ್ಲಜದಲ್ಲಿರುವ “ಮ್ಯಾಗ್ನಂ ಟಫ್ ಇಂಡಿಯಾ ಪ್ರೈವೇಟ್ ಲಿ.” ಗಾಜು ಕಾರ್ಖಾನೆಗೆ, ನಡೆದಾಡುವ ದೇವರು, ಪ್ರವಚನಗಳ ಮೂಲಕ ದೇಶ ವಿದೇಶದ ಜನತೆಗೆ ಜ್ಞಾನದಾಸೋಹ ನೀಡುತ್ತಿರುವ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಸೌಹಾರ್ದಯುತವಾಗಿ ಭೇಟಿ ನೀಡಿದಾಗ, ಅವರನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆ ಯವರು ಆತ್ಮೀಯವಾಗಿ ಬರಮಾಡಿಕೊಂಡು, ಅವರ ಆಶೀರ್ವಾದ ಪಡೆದರು. ಬಳಿಕ ಅವರಿಂದ ದೀಪ ಪ್ರಜ್ವಲನೆ ಮಾಡಿಸಿ, ಸಂಸ್ಥೆಯ ಸಿಬ್ಬಂದಿಗೆ ಆಶೀರ್ವಚನ ನೀಡಿದರು. ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ನಮ್ಮ ಕಾರ್ಖಾನೆಗೆ ಭೇಟಿ ನೀಡಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

error: Content is protected !!