ಕೂಗು ನಿಮ್ಮದು ಧ್ವನಿ ನಮ್ಮದು

ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ಪತ್ತೆಯಾಗಿದೆ ಆಯಿಲ್ ದಂಧೆಯ ಅಸಲಿಯತ್ತು! ಬೆಚ್ಚಿ ಬಿದ್ದ ಮಾಲೀಕರು,,

ತುಮಕೂರು: ಒಂದು ಕಡೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ, ಮತ್ತೊಂದು ಕಡೆ ಪೆಟ್ರೋಲ್ ಡಿಸೇಲ್ ಕಳ್ಳತನ ಈಗ ರಾಜ್ಯಾದ್ಯಂತ ಎಗ್ಗಿಲ್ಲದೇ ನಡೆಯುತ್ತಿದೆ ಇದಕ್ಕೆ ಸಾಕ್ಷಿ ಎಂಬಂತೆ, ಆಯಿಲ್ ಮಾಫಿಯಾ, ತಮ್ಮ ಬಂಕ್ ಗಳಲ್ಲಿ ಪೆಟ್ರೋಲ್ ಡಿಸೇಲ್ ಅನ್ಲೋಡ್ ಮಾಡಿಸೋ ಮಾಲೀಕರು ಒಂದು ವೇಳೆ ಟ್ಯಾಂಕರ್ ಲಾರಿಗಳನ್ನು ನೂರು ಬಾರಿ ಚೆಕ್ ಮಾಡಿ ಅಂಡರ ಗ್ರೌಂಡ ಟ್ಯಾಂಕ್ ಗಳನ್ನ ಚೆಕ್ ಮಾಡದೇ ಇದ್ರೆ ಲಕ್ಷ ಲಕ್ಷ ಉಂಡೆ ನಾಮ ಫೀಕ್ಸ್, ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ಪತ್ತೆಯಾಗಿದೆ ಆಯಿಲ್ ದಂಧೆಯ ಅಸಲಿಯತ್ತು.

ಆದಿತ್ಯ ಎಂಟರ್ ಪ್ರೈಸಸ್ ಎಂಬ ಬಂಕ್ ನಲ್ಲಿ ಆಯಿಲ್ ದಂಧೆಯ ಕರಾಳ ಮುಖ ಬಯಲಾಗಿದೆ. ಪ್ರತಿಬಾರಿ ಅಂಡರ ಗ್ರೌಂಡ್ ಟ್ಯಾಂಕರ್ ನಲ್ಲಿನ ಪೆಟ್ರೋಲ್ ನಲ್ಲಿ ವೇರಿಯೇಷನ್ ಬರ್ತಿದ್ದ ಹಿನ್ನಲೆ ಅನುಮಾನಗೊಂಡ ಟ್ಯಾಂಕರ್ ಅನ್ಲೋಡ್ ಮಾಡೋ ವೇಳೆ ಚೆಕ ಮಾಡಿದ ಮಾಲೀಕರು, ಈ ವೇಳೆ ಅಂಡರ್ ಗ್ರೌಂಡ್ ಲೆವೆನ್ ನಲ್ಲಿ ಕಡಿಮೆ ಬಂದಿದ್ದ ಪೆಟ್ರೋಲ್, ಬಳಿಕ ಲಾರಿ ಟ್ಯಾಂಕರ್ ಚೆಕ್ ಮಾಡಿದಾಗ ಮೊದಲನೇ ಹಾಗೂ ಎರಡನೇ ಕಂಫರ್ಟ ಮೆಂಟ್ ನಲ್ಲಿ ಎರಡು ಬೇಬಿ ಟ್ಯಾಂಕರ್ ಗಳು ಪತ್ತೆಯಾಗಿವೆ. ಕೊನೆ ಹಾಗೂ ಮೊದಲನೇ ಕಂಫರ್ಟಮೆಂಟ್ ನಲ್ಲಿ ಒಂದೊಂದು ಬೇಬಿ ಟ್ಯಾಂಕರ್ ನಲ್ಲಿ 60 ಲೀಟರ ಪೆಟ್ರೋಲ್ ಡಿಸೇಲ್ ಸಂಗ್ರಹ ವಾಗಿದೆ. ಇದು ಬಂಕ್ ಮಾಲೀಕರಿಗೆ ಗೊತ್ತಿಲ್ಲದೇ ಸಂಗ್ರಹ ಆಗುತ್ತಿದ್ದ ಪೆಟ್ರೋಲ್ ಎನ್ನಲಾಗಿದೆ. ಇನ್ನು ಇದು ಪ್ರತಿ ಲೋಡ್ ನಲ್ಲೂ ಹೀಗೆ ಸಂಗ್ರಹ ವಾಗುತ್ತಿದ್ದ ಪೆಟ್ರೋಲ್ ಎಂದು ತಿಳಿದು ಬಂದಿದೆ. ಒಂದು ಲೋಡ್ ಗೆ ಒಟ್ಟು 120 ಲೀಟರ್ ಸಂಗ್ರಹ ಆಗುತ್ತಿದ್ದ ಪೆಟ್ರೋಲ್ ಎರಡು ಬೇಬಿ ಟ್ಯಾಂಕರ್ ಗಳನ್ನ ಕಂಡು ಬೆಚ್ಚಿಬಿದ್ದಿದ್ದಾರೆ ಬಂಕ್ ಮಾಲೀಕರು.

ಈ ಟ್ಯಾಂಕರ್ ಗಳು ಹಾಸನದ ಟ್ರಕ್ ಟರ್ಮಿನಲ್ ನಲ್ಲಿ ಲೋಡ್ ಆಗೋ ಟ್ಯಾಂಕರ್ ವಾಹನಗಳು ಎಂದು ತಿಳಿದು ಬಂದಿದೆ. ಸದ್ಯ ಲಾರಿಯನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!