ಕೂಗು ನಿಮ್ಮದು ಧ್ವನಿ ನಮ್ಮದು

ಸರ್ಕಾರ ಅಸ್ಥಿರಗೊಳ್ಳೋ ಪ್ರಶ್ನೆಯೇ ಇಲ್ಲ ! ರಮೇಶ್ ಜಾರಕಿಹೊಳಿ ಅವರ ಜೊತೆ ನಾವಿದ್ದೇವೆ; ಸಚಿವ ಭೈರತಿ ಬಸವರಾಜ

ಹುಬ್ಬಳ್ಳಿ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಸರ್ಕಾರ ಅಸ್ಥಿರಗೊಳ್ಳೋ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಅವರು ರಮೇಶ್ ಜಾರಕಿಹೊಳಿ ಮತ್ತೆ ಬಾಂಬೆ,ದೆಹಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಭೈರತಿ ಬಸವರಾಜ ರಮೇಶ್ ಜಾರಕಿಹೊಳಿ ಅವರ ಜೊತೆ ನಾವಿದ್ದೇವೆ, ಸಣ್ಣ ಪುಟ್ಟ ತೊಂದರೆಗಳು ಆಗಿದೆ, ಅವೆಲ್ಲವೂ ಶೀಘ್ರದಲ್ಲೇ ಬಗೆಹರಿಯಲಿದೆ, ಅವರು ಯಾವುದೇ ಉದ್ವೇಗದಲ್ಲಿ ರಾಜೀನಾಮೆ ಬಗ್ಗೆ ಹೇಳಿದ್ದಾರೆ,

ಆದರೆ ಹಿಂದೆಯೂ ಅವರ ಜೊತೆ ಇದ್ದೆವು ಮುಂದೆಯೂ ಅವರ ಜೊತೆ ನಾವೆಲ್ಲಾ ಇರುತ್ತೇವೆ ಎಂದ ಭೃರತಿ ಬಸವರಾಜ, ಪ್ರಕರಣದ ಬಗ್ಗೆ ಎಸ್ ಐ ಟಿಯಲ್ಲಿ ತನಿಖೆ ನಡೆಯುತ್ತಿದೆ, ಏನು ತೀರ್ಮಾನ ಆಗುತ್ತೋ ನೋಡೋಣ ಎಂದರು. ಇನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು 25 ರಿಂದ 30 ರಷ್ಟು ಕಾಮಗಾರಿ ಇನ್ನು ಹಾಗೆಯೇ ಬಾಕಿ ಇದೆ, ಈಗಾಗಲೇ ಅಧಿಕಾರಿಗಳಿಗೆ 1 ತಿಂಗಳ ಗಡುವು ನೀಡಿದ್ದೇನೆ, ಎಲ್ಲೆಲ್ಲಿ ಕೆಲಸ ನಿಧಾನ ಗತಿಯಲ್ಲಿ ಸಾಗುತ್ತಿದೆ ಅಲ್ಲಿ ಹೆಚ್ಚು ಕಾರ್ಮಿಕರ ಬಳಕೆಗೆ ಸೂಚನೆ ನೀಡಿದ್ದೇನೆ ಎಂದರು.ಇನ್ನು ಪಾಲಿಕೆಯಿಂದ 240 ಕೋಟಿ ರೂ ಪ್ರಸ್ತಾವನೆ ಸಹ ಈಗಾಗಲೇ ಕೊಟ್ಟಿದ್ದಾರೆ, ಹು-ದಾ ನಗರಗಳು ರಾಜ್ಯದ ಅತ್ಯುತ್ತಮ ನಗರಗಳಾಗಿ ಹೊರಹೊಮ್ಮಲಿವೆ ಎಂದರು.

error: Content is protected !!