ಕೂಗು ನಿಮ್ಮದು ಧ್ವನಿ ನಮ್ಮದು

ಶಾಸಕ ಪರಮೇಶ್ವರ್ ನಾಯ್ಕ್ ಸೋದರನಿಂದ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ

ವಿಜಯನಗರ: ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ.ಶಿವಾಜಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಲಕ್ಷ್ಮೀಪುರದಲ್ಲಿ ಹಾರೆಯಿಂದ ಶರಣ ನಾಯ್ಕ್ ಎಂಬುವವರ ಮೇಲೆ ಹಲ್ಲೆ ನಡೆದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದ ನಿವಾಸಿ ಹಲ್ಲೆಗೊಳಗಾದ ವ್ಯಕ್ತಿ. ಗಾಯಾಳು ಶರಣ ನಾಯ್ಕ್ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕಬ್ಬಿಣದ ಹಾರೆಯಿಂದ ಹಲ್ಲೆ ಮಾಡಿರುವ ಪಿ ಟಿ ಶಿವಾಜಿ: ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡಾದಲ್ಲಿ ಘಟನೆ ನಡೆದಿದ್ದು, ಮನೆ ಜಾಗದ ಸಲುವಾಗಿ ಶರಣ ನಾಯ್ಕನ ಮೇಲೆ ಹಲ್ಲೆ ನಡೆದಿದೆ. ಘಟನೆ ವೀಡಿಯೋದಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.

ಆರಂಭದಲ್ಲಿ ದೈಹಿಕವಾಗಿ ಹಲ್ಲೆ ನಡೆಸಿ, ವ್ಯಕ್ತಿಯನ್ನು ಸುಮ್ಮನಾಗಿಸಲು ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ.ಶಿವಾಜಿ ಯತ್ನಿಸುತ್ತಾನೆ. ಆ ವೇಳೆ ವೃದ್ಧನನ್ನು ನೆಲದ ಮೇಲೆ ಕೆಡವಿ, ಧಮ್ಕಿ ಹಾಕುತ್ತಾನೆ. ಹಲ್ಲೆಗೊಳಗಾದ ವ್ಯಕ್ತಿ ಮನೆಯ ಹೆಣ್ಣು ಮಕ್ಕಳು ಅಡ್ಡ ಬಂದರೂ ಕೇರ್ ಮಾಡದೆ ಶಿವಾಜಿ ಆರ್ಭಟು ತೋರಿದ್ದಾನೆ. ಬಳಿಕ, ಅಷ್ಟೇ ಸಾಲದು ಅಂತಾ ಅಲ್ಲೆ ಇದ್ದ ಹಾರೆಯನ್ನು ಉದ್ದೋಉದ್ದ ತೆಗೆದುಕೊಂಡು ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ.

error: Content is protected !!