ಕೂಗು ನಿಮ್ಮದು ಧ್ವನಿ ನಮ್ಮದು

ತಾಕತ್ತಿದ್ರೆ 2023 ರ ಚುನಾವಣೆಯಲ್ಲಿ ನೀನೆ ನಿಲ್ಲು ಆಗ ನನ್ನ ತಾಕತ್ತು ಏನು ಅಂತ ತೋರಿಸ್ತೀನಿ! ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಗೆ ಮಾಜಿ ಶಾಸಕ ಕಾಶಪ್ಪನ್ನವರ ಸವಾಲ್!

ಬಾಗಲಕೋಟೆ: ಇನ್ನು ರಾಜ್ಯದ ವಿಧಾನಸಭೆ ಚುನಾವಣೆ ಎರಡು ವರ್ಷ ಇರುವಾಗಲ್ಲೇ ಚುನಾವಣೆಯ ಸವಾಲ್ ಆರಂಭವಾಗ ತೋಡಗಿವೆ, ಇದಕ್ಕೆ ತಾಜಾ ಉದಾಹರಣೆ ಅಂದರೆ ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕ ವಿಜಯಾನಂದ ಕಾಶಪ್ಪನ್ನವರ ಈಗ ಹುನಗುಂದ ಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ್ ಅವರಿಗ ತಾಕತ್ತಿದ್ರೆ 2023 ರ ಚುನಾವಣೆಯಲ್ಲಿ ನೀನೆ ನಿಲ್ಲು ಆಗ ನನ್ನ ತಾಕತ್ತು ಏನು ಅಂತ ತೋರಿಸ್ತೀನಿ ಎಂದು ಸವಾಲ್ ಹಾಕಿದ್ದಾರೆ.

ಇಂದು ಇಲಕಲ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಶಪನ್ನವರ ಹಾಲಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಶಾಸಕ ದೊಡ್ಡನಗೌಡ ಪಾಟೀಲ್ ಮತ್ತು ಪುತ್ರ ರಾಜುಗೌಡ ಪಾಟೀಲ್ ವಿರುದ್ಧ ಏಕವಚನದಲ್ಲೇ ಕಾಶಪ್ಪನ್ನವರ ವಾಗ್ದಾಳಿ ನಡೆಸಿ,

2023ರಲ್ಲಿ ನೀನೇ ನಿಲ್ಲಬೇಕು, ಅವರಿವರನ್ನು ನಿಲ್ಲಿಸುತ್ತೇನೆ ಅಂತ ಹೇಳ್ತೀರಿ ಯಾಕೆ ಎಂದ ಕಾಶಪ್ಪನ್ನವರ, ಅಪ್ಪ ಮಗ ಇಬ್ಬರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿ, ನಿಮ್ಮ ಮಗನ ಕೈಯಲ್ಲಿ ಒಬ್ಬ ಅಧಿಕಾರಿ ಉಳಿದಿಲ್ಲ, ಕ್ಷೇತ್ರದಲ್ಲಿ ಒಂದು ಮರಳು ಪಾಯಿಂಟ್ ಉಳಿದಿಲ್ಲ, ಕ್ಷೇತ್ರದಲ್ಲಿ ಗುಂಡಾಗಿರಿ ನಡೆದಿದೆ, ನಾನು ಒಬ್ಬ ಮಾಜಿ ಶಾಸಕ ನನ್ನ ಮೇಲೆಯೇ ಹಲ್ಲೆ ಆಗ್ತದೆ ಎಂದ ಆಕ್ರೋಶಗೊಂಡರು, ಶಾಸಕ ಹಾಗೂ ಅವರ ಪುತ್ರನ ಕುಮ್ಮಕ್ಕಿನಿಂದ ನನ್ನ ಮನೆಗೆ ಬಂದು ಹಲ್ಲೆ ಮಾಡ್ತೇವಿ ಅಂತಾರೆ,

ಊರಲ್ಲಿ ಹಪ್ತಾ ವಸೂಲಿ ನಡೆದಿದೆ, ಬಡವರಿಗೆ ಹತ್ತರ ಬಡ್ಡಿಯಲ್ಲಿ ದುಡ್ಡು ಕೊಡುವ ದಂಧೆ ಇಲ್ಲಿ ನಡೆಯುತ್ತದೆ ಎಂದು ಆರೋಪಿಸಿದರು. ಈ ಬಡ್ಡಿ ವ್ಯವಹಾರ ನಡೆಯಲು ಬಿಟ್ಟವರು ಯಾರು ಎಂದು ಪ್ರಶ್ನಿಸಿದ್ದ ಕಾಶಪ್ಪನ್ನವರ ಇದೇ ಶಾಸಕ ದೊಡ್ಡನಗೌಡರ ಎಂದರು. ಈ ಸುದ್ದಿ ಗೋಷ್ಠಿಗೆ ಕಾರಣ ಕಳೆದ ಎರಡು ದಿನಗಳ ಹಿಂದಷ್ಟೇ ಮನೆಗೆ ವಾರೆಂಟ್ ಕೊಡಲು ಬಂದಿದ್ದ ಪೊಲೀಸ್ ಅಧಿಕಾರಿಗಳಿಗೆ ಕಾಶಪ್ಪನ್ನವರ ಅವಾಜ್ ಹಾಕಿ ಶಾಸಕರ ಕುಮ್ಮಕ್ಕು ನಿಂದ ನನ್ನ ಮನೆಗೆ ಬಂದಿದ್ದಿರಿ ನೀವು ಎಂದು ಶಾಸಕ ದೊಡನಗೌಡ ಪಾಟೀಲ ವಿರುದ್ಧ ಕಿಡಿ ಕಾರಿದ್ದರು.

error: Content is protected !!