ಚಾಮರಾಜನಗರ: ಬೈಕ್ ನಲ್ಲಿ ಅಕ್ರಮವಾಗಿ ಕಾಡು ಪ್ರಾಣಿಯ ಮಾಂಸ ಸಾಗಣೆ ಮಾಡುತ್ತಿದ್ದ ಪತಿ ಪತ್ನಿಯರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಅಡ್ಡರಸ್ತೆಯಿಂದ ಲೊಕ್ಕನಹಳ್ಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ಧಾಮದ ಸಹಾಯಕ ಅರಣ್ಯ ರಕ್ಷಣಾಧಿಕಾರಿ ಏಡುಕೊಂಡಲು ಮಾರ್ಗದರ್ಶನದಲ್ಲಿ, ಕೊಳ್ಳೇಗಾಲ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ
ಸಂರಕ್ಷಣಾಧಿಕಾರಿ ವನಿತಾ ಆರ್ ಹಾಗೂ ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಸೈಯದಸಾಬ ನದಾಫರವರ ನೇತೃತ್ವದಲ್ಲಿ ಪಿ.ಜಿ.ಪಾಳ್ಯ ಅಡ್ಡರಸ್ತೆಯಿಂದ ಲೊಕ್ಕನಹಳ್ಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ದಾಳಿ ನಡೆಸಲಾಯಿತು.
ಕಾಡು ಪ್ರಾಣಿಯ ಮಾಂಸವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ದಾಟುಕಡು
ಪ್ರದೇಶದಲ್ಲಿ ದಿ ್ವಚಕ್ರ ವಾಹನವನ್ನು ತಡೆದು ಪರಿಶೀಲಿಸಲಾಗಿ ಅಂದಾಜು 6.5ಕೆಜಿ ತೂಕದ ಹಸಿಮಾಂಸವು ಕಂಡುಬಂದಿದ್ದು, 6.5 ಕೆ.ಜಿ. ಕಡವೆಯ ಹಸಿಮಾಂಸ, ಹಿರೋ ಪ್ಯಾಷನ್ ದ್ವಿಚಕ್ರ
ವಾಹನವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.
ಪಿ.ಜಿ.ಪಾಳ್ಯ ವಲಯದಲ್ಲಿ ಆರೋಪಿತರ ಮೇಲೆ ಅರಣ್ಯ ಮೊಕದ್ದಮೆ
ದಾಖಲಿಸಲಾಗಿದೆ.
ಗುಳ್ಳದ ಬಯಲು ಗ್ರಾಮದ ನಾಗೇಶ ಬಿನ್ ಪುಟ್ಟ, ಹಾಗೂ ಈತನ ಪತ್ನಿ ಮಾದೇವಿ,
ಸೋಮು ಅಲಿಯಸ್ ಕರಿಯ, ರಾಮಾಪುರ ಗ್ರಾಮ ಹಾಲಿ ವಾಸ ಬಸವನಗುಡಿ ಗ್ರಾಮ
ಬಂಧಿತ ಆರೋಪಿಗಳು.
ಪಿ.ಜಿ.ಪಾಳ್ಯದ ಅಡ್ಡರಸ್ತೆಯಲ್ಲಿ ಕಡವೆ ಮಾಂಸವನ್ನು ಪಡೆದು ಲೊಕ್ಕನಹಳ್ಳಿ ಮಾರ್ಗವಾಗಿ
ಗುಂಡಾಲ್ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ
ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೊಪಿಯ ಪತ್ತೆ ಕಾರ್ಯ ನಡೆಯುತ್ತಿದೆ.