ಕೂಗು ನಿಮ್ಮದು ಧ್ವನಿ ನಮ್ಮದು

130 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆ ಅಂತಿಮ ಹಂತದಲ್ಲಿ : ಗಣೇಶ್ ಹುಕ್ಕೇರಿ

ಬೆಳಗಾವಿ: ಚಿಕ್ಕೋಡಿ-ಸದಲಗಾ ಕ್ಷೇತ್ರದ 1200 ಹೆಕ್ಟೇರ್ ರೈತರ ಜಮಿನಿಗೆ ಶಾಶ್ವತವಾಗಿ ನೀರು ಪೂರೈಸುವ ಸಲುವಾಗಿ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿಯವರ ವಿಶೇಷ ಪ್ರಯತ್ನದಿಂದ ಸುಮಾರು 130 ಕೋಟಿ ರೂಪಾಯಿ ವೆಚ್ಚದಲ್ಲಿ , ನಡೆಯುತ್ತಿರುವ ಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಶಾಸಕ ಗಣೇಶ್ ಹುಕ್ಕೇರಿ ಭೇಟಿ ನೀಡಿ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಶಾಸಕ ಹುಕ್ಕೇರಿ ಜೂನ್ ಮೊದಲ ವಾರದಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಆದ್ರೆ ಮುಂಗಾರು ಮಳೆ ಬೇಗ ಆರಂಭ ಆಗಿ, ಕೃಷ್ಣೆ ತುಂಬಿ ಹರಿದ ಪರಿಣಾಮ ಕಾರ್ಯ ಇದುವರೆಗೂ ಮುಕ್ತಾಯ ಆಗಿಲ್ಲ. ಈಗ ನದಿ ನೀರು ಕಡಿಮೆ ಆಗಿರುವ ಹಿನ್ನೆಲೆ ಮತ್ತೆ ಕಾಮಗಾರಿ ನಡೆಯುತ್ತಿದ್ದೂ, ಕೆಲವೆ ದಿನಗಳಲ್ಲಿ ಮುಕ್ತಾಯ ಗೊಳ್ಳಲಿದೆ ಎಂದು ತಿಳಿಸಿದರು.

ಇನ್ನೂ ಈ ಯೋಜನೆಯಿಂದ ಹಿರೆಕೊಡಿ, ನಾಗರಾಳ, ನೇಜ, ಸಂಕಣವಾಡಿ, ನವಲಿಹಾಳ ಹಾಗೂ ಖಡಕಲಾಟ ಭಾಗದ ನೀರಿನ ಸಮಸ್ಯೆ ಬಗೆಹರಿಸಿ, ರೈತರನ್ನು ಆರ್ಥಿಕವಾಗಿ ಸಧೃಡ ಮಾಡುವ ಗುರಿ ನಮ್ಮದಾಗಿದ್ದೂ ಆದಷ್ಟು ಬೇಗ ಕಾಮಗಾರಿ ಮುಕ್ತಾಯ ಗೊಳಿಸಲು ಸಂಬಂಧಪಟ್ಟ ಗುತ್ತಿಗೆದರಾರಿಗೆ ಸೂಚನೆ ನೀಡಿದ್ದೇನೆ ಎಂದು ಗಣೇಶ್ ಹುಕ್ಕೇರಿ ಹೇಳಿದರು.

error: Content is protected !!