ಬೆಂಗಳೂರು ; ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಆದರೆ, ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು? ಎಂಬ ಚರ್ಚೆ ಗೊಂದಲ ಮನೆ ಮಾಡಿದೆ. ಈ ನಡುವೆ ಈ ಬಗ್ಗೆ ಮಾತನಾಡಿರುವ ಸಚಿವ ಸುಧಾಕರ್, “ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ಕುರಿತು ಗೊಂದಲ ಇದೇನು ಹೊಸದಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿಯ ಕುರಿತ ಗೊಂದಲಕ್ಕೆ ಇಂದು ಬೆಂಗಳೂರಿನಲ್ಲಿ ವ್ಯಂಗ್ಯವಾಡಿರುವ ಸಚಿವ ಸುಧಾಕರ್, “ಕಾಂಗ್ರೆಸ್ನಲ್ಲಿ ಇದೇನು ಹೊಸದಾ…? ಕಾಂಗ್ರೆಸ್ ಪಕ್ಷದ ಆರಂಭ ಆದಾಗಿನಿಂದಲೂ ಈ ಗೊಂದಲ ಇದೆ. ದಲಿತ ಸಿಎಂ ಮಾಡಬೇಕೆಂಬ ಕೂಗು ಸಹ ಯಾವಾಗಲೂ ಇರುತ್ತದೆ. ಆದರೆ, ಕೈ ನಾಯಕರು ಇದನ್ನು ಸುಮ್ಮನೆ ಹೇಳುತ್ತಾರೆಯೇ ಹೊರತು ಮಾಡಲ್ಲ. ಇವರು ದಲಿತರನ್ನು ಪ್ರಧಾನಿ ಮಾಡಿದ್ದಾರಾ… ಸಿಎಂ ಮಾಡಿದ್ದಾರಾ….? ಎಂದು ಪ್ರಶ್ನಿಸಿದ್ದಾರೆ.
ಇನ್ನು ಅವರು ಸುಮ್ಮನೆ ದಲಿತರ ಹೆಸರು ಹೇಳಿಕೊಂಡು ಮತ ಪಡೆಯುತ್ತಾರಷ್ಟೆ ಹೊರತು ದಲಿತರನ್ನು ಸಿಎಂ ಮಾಡಲ್ಲ. ಅಲ್ಪಾಸಂಖ್ಯಾತರ ಪರ ಅಂತಾರೆ ಬರೀ ವೋಟ್ ಬ್ಯಾಂಕ್ ಅಷ್ಟೇ ಅವರಿಗೆ ಮುಖ್ಯ. ಆದರೆ, ಬಿಜೆಪಿಯಲ್ಲಿ ನರೇಂದ್ರ ಮೋದಿ ಎಲ್ಲಾ ವರ್ಗದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ” ಎಂದು ಸುಧಾಕರ್ ವ್ಯಂಗ್ಯವಾಡಿದ್ದಾರೆ.