ಕೂಗು ನಿಮ್ಮದು ಧ್ವನಿ ನಮ್ಮದು

ಬಿಗ್ ಬಾಸ್; ಕಿಚ್ಚ ಸುದೀಪ್ ಎದುರಿನಲ್ಲೇ ನಡೆದ ಮಾತಿನ ಯುದ್ಧದಲ್ಲಿ ದಿವ್ಯಾ ಸುರೇಶ್ ಕಣ್ಣೀರು ಹಾಕಿದ್ದು ಯಾಕೇ! ಈ ಸ್ಟೋರಿ ಓದಿ..

ಬೆಂಗಳೂರು; ತೀವ್ರ ಕುತೂಹಲ ಮೂಡಿಸಿರುವ ಬಿಗ್ ಬಾಸ್ ಕನ್ನಡದ ಎರಡನೇ ಇನ್ನಿಂಗ್ಸ್ನಲ್ಲಿ ಈಗ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಬಿಗ್ ಬಾಸ್ ಬಹುತೇಕ ಸ್ಪರ್ಧಿಗಳು ತಮ್ಮ ಹಳೇ ಎಪಿಸೋಡ್ಗಳನ್ನು ನೋಡಿಕೊಂಡು ಬಂದಿದ್ದಾರೆ. ಬೆನ್ನ ಹಿಂದೆ ಯಾರು ಏನೆಲ್ಲ ಮಾತನಾಡಿದ್ದಾರೆ ಎಂಬುದು ತಿಳಿದುಕೊಂಡಿರುವ ಎಲ್ಲರೂ ಹೊಸ ತಂತ್ರದ ಮೂಲಕ ಆಟ ಮುಂದುವರಿಸಿದ್ದಾರೆ. ಎರಡನೇ ಇನ್ನಿಂಗ್ಸ್ನ ಮೊದಲ ವೀಕೆಂಡ್ನಲ್ಲೇ ಮಂಜು ಪಾವಗಡ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ದೊಡ್ಡ ಜಟಾಪಟಿ ನಡೆದಿದೆ.

ಎರಡನೇ ಇನ್ನಿಂಗ್ಸ್ ಶುರುವಾಗುತ್ತಿದ್ದಂತೆಯೇ ದೊಡ್ಮನೆಯೊಳಗೆ ಈ ವಿಚಾರ ಚರ್ಚೆಗೆ ಬಂದಿತ್ತು. ಈಗ ‘ಸೂಪರ್ ಸಂಡೇ ವಿತ್ ಸುದೀಪ’ ಎಪಿಸೋಡ್ನಲ್ಲಿ ಮಂಜು ಮತ್ತು ದಿವ್ಯಾ ಸುರೇಶ್ ಅವರ ಮದುವೆ ವಿಚಾರಕ್ಕೆ ದೊಡ್ಡ ವಾಗ್ವಾದ ನಡೆದು ಹೋಗಿದೆ. ಮೊದಲ ಇನ್ನಿಂಗ್ಸ್ ಶುರುವಾದಾಗ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಅವರು ತಮಾಷೆಗೆ ಗಂಡ-ಹೆಂಡತಿ ರೀತಿ ನಾಟಕ ಆಡಿದ್ದರು. ಅದೇ ವಿಚಾರ ಇಟ್ಟುಕೊಂಡು ಚಕ್ರವರ್ತಿ ಚಂದ್ರಚೂಡ್ ಈಗ ಆಕ್ಷೇಪ ಎತ್ತಿದ್ದಾರೆ.

‘ಶ್ರೀಮಾನ್ ಮಂಜು ಪಾವಗಡ, ಒಂದು ಶೋಗೋಸ್ಕರ ಒಬ್ಬಳು ಹೆಣ್ಣನ್ನು ಹೆಂಡತಿಯಾಗಿ ಹೇಗೆ ಮಾಡಿಕೊಳ್ಳುತ್ತಾನೆ’ ಎಂದು ಚಂದ್ರಚೂಡ್ ತೀವ್ರವಾಗಿ ಕಿಡಿಕಾರಿದ್ದಾರೆ. ಚಂದ್ರಚೂಡ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಂಜು, ‘ಅದು ನಾಟಕ ಎಂಬುದು ಇಡೀ ಮನೆಯವರಿಗೆ ಗೊತ್ತಿತ್ತು’ ಎಂದಿದ್ದಾರೆ. ‘ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ ಸರ್’ ಎಂದು ಇನ್ನಷ್ಟು ಗರಂ ಆಗಿ ಚಂದ್ರಚೂಡ್ ತಿರುಗೇಟು ನೀಡಿದ್ದಾರೆ. ‘ಇಲ್ಲಿದ್ದಾಗ ನಕ್ಕು, ಮಜಾ ಮಾಡಿ, ಹೊರಗೆ ಹೋದಮೇಲೆ ಇದೆಲ್ಲ ನಿಮಗೆ ನೆನಪಾಯ್ತಾ’ ಎಂದು ಮಂಜು ಮರುಪ್ರಶ್ನೆ ಹಾಕಿದ್ದಾರೆ. ಒಟ್ಟಾರೆ ಕಿಚ್ಚ ಸುದೀಪ್ ಎದುರಿನಲ್ಲೇ ನಡೆದ ಈ ಮಾತಿನ ಯುದ್ಧದಲ್ಲಿ ದಿವ್ಯಾ ಸುರೇಶ್ ಕಣ್ಣೀರು ಹಾಕಿದ್ದಾರೆ!

error: Content is protected !!