ಕೂಗು ನಿಮ್ಮದು ಧ್ವನಿ ನಮ್ಮದು

ಚಿರತೆ ಸರಣಿ ದಾಳಿಗೆ ಬೆಚ್ಚಿದ ಹೊಸಪುರ ಗ್ರಾಮಸ್ಥರು

ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಹೊಸಪುರ ಗ್ರಾಮದಲ್ಲಿ ನಡುರಾತ್ರಿ ದಾಳಿ ನಡೆಸಿದ ಚಿರತೆ ಗ್ರಾಮದ ಚಿಕ್ಕಣ್ಣ ನಾಗೇಗೌಡ ಎಂಬುವವರಿಗೆ ಸೇರಿದ ಮೇಕೆಯೊಂದನ್ನು ಕೊಂದು ಹಾಕಿದ್ದು ಕರುವಿನ ಕುತ್ತಿಗೆ ಭಾಗಕ್ಕೆ ಬಲವಾಗಿ ದಾಳಿ ನಡೆಸಿದೆ..

ಕಾಡಂಚಿನ ಗ್ರಾಮ ಗುಂಡ್ಲುಪೇಟೆ ತಾಲ್ಲೂಕಿನ ಓಂ ಕಾರ ವಲಯದ ಹೊಸಪುರದಲ್ಲಿ ವನ್ಯಜೀವಿಗಳ ಕಾಟ ಜಾಸ್ತಿಯಾಗಿದ್ದು ರಾತ್ರೋ ರಾತ್ರಿ ಗ್ರಾಮದೊಳಗೆ ದಾಳಿ ನಡೆಸುವ ಮೃಗಗಳು ನಮ್ಮ ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿವೆ ಎಂದು ಗ್ರಾಮದ ಮಹೇಶ್ ಆರೋಪಿಸಿದ್ದಾರೆ.

ತಡರಾತ್ರಿ ಸುಮಾರು ಒಂದು ಗಂಟೆಯ ಸಮಯದಲ್ಲಿ ಚಿರತೆಯೊಂದು ತನ್ನ ಮರಿಯೊಡನೆ ದಾಳಿ ನಡೆಸಿ ಒಂದು ಮೇಕೆಯನ್ನು ಕೊಂದು ಹಾಕಿರುವುದರಲ್ಲದೆ ಕರುವಿನ ಮೇಲೂ ದಾಳಿ ನಡೆಸಿ ಗಾಯಗೊಳಿಸಿದ್ದು ಕರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ವನ್ಯ ಜೀವಿಗಳ ಲಗ್ಗೆ ಕುರಿತು ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಯಾರು ಇದರ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಪದೇಪದೇ ಗ್ರಾಮದೊಳಗೆ ಪ್ರವೇಶಿಸುತ್ತಿರುವ ಚಿರತೆ ಸೆರೆಗೆ ಇಲಾಖೆ ಬೋನ್ ಇರಿಸಿ ಬಂದಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!