ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಮತ್ತು ಹೊನ್ನಿಹಾಳ ಗ್ರಾಮದಲ್ಲಿ ಒಟ್ಟೂ 6 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಸಾಂಬ್ರಾ ಗ್ರಾಮದಲ್ಲಿ 4.20 ಕೋಟಿ ರೂ.ಗಳ ವೆಚ್ಚದಲ್ಲಿ ಹಾಗೂ ಹೊನ್ನಿಹಾಳ ಗ್ರಾಮದಲ್ಲಿ 1.80 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಹಾಗೂ ಓವರ್ ಹೆಡ್ ಟ್ಯಾಂಕ್ ಗಳ ನಿರ್ಮಾಣ ಕಾಮಗಾರಿ ಮಂಜೂರಾಗಿದ್ದು, ಎರಡೂ ಕಡೆ ಪೂಜೆ ನೆರವೇರಿಸಲಾಯಿತು.
ಸಾಂಬ್ರಾದಲ್ಲಿ ಪೈಪ್ ಲೈನ್ ಸುಮಾರು 22 ಕಿಲೋಮೀಟರ್ ಗಳ ಉದ್ದವನ್ನು ಒಳಗೊಂಡಿದ್ದು, ನೇರವಾಗಿ ಮನೆಯಿಂದ ಮನೆಗೆ ಪೈಪ್ ಲೈನ್ ಗಳ ಮೂಲಕ ನಳಗಳು ಅಳವಡಿಕೆಯಾಗಲಿವೆ. ಜೊತೆಗೆ ನಾಲ್ಕು ಹೊಸ ಓವರ್ ಹೆಡ್ ಟ್ಯಾಂಕ್ ಗಳ ನಿರ್ಮಾಣ, ಎರಡು ಹಳೆಯ ಓವರ್ ಹೆಡ್ ಟ್ಯಾಂಕ್ ರಿಪೇರಿಯನ್ನು ಸಹ ಒಳಗೊಂಡಿದೆ.
ಹೊನ್ನಿಹಾಳ ಗ್ರಾಮದಲ್ಲಿ ಕೂಡ ಪೈಪ್ ಲೈನ್ ಗಳ ಮೂಲಕ ನಳಗಳು ಅಳವಡಿಕೆಯಾಗಲಿದ್ದು, ಒಂದು ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿದೆ.
ನಿಗದಿತ ಸಮಯದಲ್ಲಿ ಕಾಮಗಾರಿಗಳ ಮುಕ್ತಾಯವನ್ನು ಮುಗಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ ಹೆಬ್ಬಾಳಕರ್, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳವ ಮೂಲಕ ರಸ್ತೆಯ ಎರಡು ಬದಿ ಭೂಮಿಯನ್ನು ಅಗಿಯುವಾಗ, ಪೈಪ್ ಲೈನ್ ಜೋಡಿಸುವಾಗ, ರಸ್ತೆಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರು.