ಕೂಗು ನಿಮ್ಮದು ಧ್ವನಿ ನಮ್ಮದು

ವಿದ್ಯಾರ್ಥಿಗಳಿಗೆ 200 ಬೆಂಚ್ ಹಾಗೂ ಮತ್ತಿತರ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಪಾಟೀಲ

ಬೆಳಗಾವಿ: ಕಾಗವಾಡ ಪಟ್ಟಣದ ಬಸವ ನಗರದ ಸರ್ಕಾರಿ ಶಾಲೆಯಲ್ಲಿ ಸರ್ಕಾರದ ವತಿಯಿಂದ ಒಂದು ಸ್ಮಾರ್ಟ್ ಬೋರ್ಡ್, ಹಾಗೂ ಗ್ರೀನ್ ಬೋರ್ಡ್ & ವಿದ್ಯಾರ್ಥಿಗಳಿಗೆ 200 ಬೆಂಚ್ ಗಳನ್ನು ಹಾಗೂ ಮತ್ತಿತರ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಕಾಗವಾಡ ಮತಕ್ಷೇತ್ರದ ಶಾಸಕ ಹಾಗೂ ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರು ಚಾಲನೆ ನೀಡಿ, ಪಟ್ಟಣ ಪಂಚಾಯತ್ ವತಿಯಿಂದ ಕಾಗವಾಡ ಗ್ರಾಮದ ಎಲ್ಲ ಕುಟುಂಬಗಳಿಗೆ ಘನತ್ಯಾಜ್ಯ ಸಂಗ್ರಹಿಸಲು 6 ಸಾವಿರ ಬಕೆಟ್ಟಗಳನ್ನು ವಿತರಿಸಿದರು.

ಈ ಸಮಯದಲ್ಲಿ ಕಾಗವಾಡ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಯತೀಶ್ವರಾನಂದ ಸ್ವಾಮೀಜಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವೀರಣ್ಣಗೌಡ ಎಗನಗೌಡರ, ಕ್ಷೇತ್ರ ಶಿಕ್ಷಣದ ಅಧಿಕಾರಿಗಳಾದ ಮಲ್ಲಪ್ಪ ಮುಂಜೆ, ಪಟ್ಟಣ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ತಾನಗೋಡ, ಪಿಡಿಓ ವೀರಪ್ಪ ಗಡಗಂಚಿ ಹಾಗೂ ಸ್ಥಳೀಯ ಮುಖಂಡರಾದ ಸುಭಾಷ ಕಠಾರೆ, ಪ್ರಕಾಶ ಪಾಟೀಲ, ಪ್ರಕಾಶ ಚೌಗುಲೆ, ಸಚಿನ ಕವಟಗೆ, ಬಾಬಾಸಾಬ ಚೌಗುಲೆ, ಕಾಕಾಸಾಬ ಚೌಗುಲೆ, ವಿಠ್ಠಲ ಪವಾರ,ಬಪ್ರಕಾಶ ದೊಂಡಾರೆ, ರಮೇಶ ಚೌಗುಲೆ, ಜಾವೇದ ಶೇಖ್, ಅರುಣ ಜೋಶಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!