ಕೂಗು ನಿಮ್ಮದು ಧ್ವನಿ ನಮ್ಮದು

ಮಾನವ ಬಂಧುತ್ವ ವೇದಿಕೆ ವತಿಯಿಂದ ಘಟಪ್ರಭಾದಲ್ಲಿ ಶಾಹು‌‌ ಮಹಾರಾಜರ 147 ನೇ ಜಯಂತಿ ‌ಆಚರಣೆ

ಬೆಳಗಾವಿ: ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಘಟಪ್ರಭಾದ ಎನ್.ಎಸ್.ಹರ್ಡಿಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಶಾಹು‌‌ ಮಹಾರಾಜರ 147 ನೇ ಜಯಂತಿಯನ್ನು ‌ಆಚರಿಸಲಾಯಿತು. ರಾಜ್ಯ ಸಂಚಾಲಕರಾದ ರವೀಂದ್ರ ನಾಯ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ‌ ಜಯಂತಿ ಕಾರ್ಯಕ್ರಮದಲ್ಲಿ ಶಾಹು‌ ಮಹಾರಾಜರ ಕುರಿತು ವಿಚಾರವಾದಿ ಮಹಾಲಿಂಗಪ್ಪ ಅಲಬಾಳ ಅವರು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಜೀವನ ಮಾಂಜ್ರೇಕರ್, ಭರಮಣ್ಣ ತೋಳಿ, ಡಾ.ಪ್ರದೀಪ ಮಾಲ್ಗುಡಿ, ಬಾಲಕೃಷ್ಣ ನಾಯಕ ಮತ್ತು ಉಷಾ ನಾಯ್ಕ ವೇದಿಕೆಯಲ್ಲಿ ಇದ್ದರು. ಮಾನವ ಬಂಧುತ್ವ ವೇದಿಕೆಯ ಬೆಳಗಾವಿ ಜಿಲ್ಲಾ ಸಂಚಾಲಕರು ಸೇರಿ ಕಾರ್ಯಕರ್ತರು ಭಾಗವಹಿಸಿದರು. ಸುರೇಶ ಶಿಕಾರಿಪುರ ಅವರು ನಿರೂಪಣೆ ಮಾಡಿದರು.

error: Content is protected !!