ಕೊಪ್ಪಳ: ಈ ಪೋಟೋದಲ್ಲಿ ಕಾಣಿಸುವ ಯುವತಿ ಯುವಕ ಇವರಿಬ್ಬರ ವಯಸ್ಸು ಹುಚ್ಚು ಪ್ರೀತಿಯ ವಯಸ್ಸು, ಇವರಿಬ್ಬರ ಪರಿಚಯ ಆಗಿದ್ದು ಬ್ಯಾನ್ ಆಗುವುದಕ್ಕೂ ಮುನ್ನ ಟಿಕ್ಟಾಕ್ ನಲ್ಲಿ, ಬಳಿಕ ಫೇಸ್ಬುಕ್, ವಾಟ್ಸಪ್ನಲ್ಲಿ ಗಂಟೆ ಗಂಟೆಗಳ ಕಾಲ ಮಾತುಕತೆ, ಹೀಗಾಗಿ ನಂತರ ಸಲಿಗೆ ಬೆಳೆದ್ದು ಪ್ರೀತಿಗೆ ತಿರುಗಿದೆ ಈ ಪ್ರೇಮಿಗಳ ಲವ್. ನಂತರ 7 ತಿಂಗಳ ಹಿಂದಷ್ಟೇ ಈ ಜೋಡಿ ವಿವಾಹವಾಗಿದ್ದರು.
ಆದರೆ ಈ ಪ್ರೇಮಿಗಳ ಮೇಲೆ ಅದು ಯಾರ ಕಣ್ಣು ಬಿತ್ತು ಗೊತ್ತಿಲ್ಲ. ಈ ಇಬ್ಬರು ಪ್ರೇಮಿಗಳು ಲವ್ ಮಾಡಿ ಸಪ್ತಪದಿ ತುಳಿದು ತಮ್ಮ ಸುಖ ಸಂಸಾರ ನಡೆಸುವ ಸಮಯದಲ್ಲಿ.ಅದೇನ ಆಯತ್ತೋ ಗೊತ್ತಿಲ್ಲ. ಪ್ರೀತಿಸಿ ಕೈ ಹಿಡಿದು ನೂರಾರು ಕನಸುಗಳನ್ನ ಕಟ್ಟಿಕೊಂಡ ಈ ಯುವತಿಯ ಬದುಕು ಈಗ ದುರಂತ ಅಂತ್ಯವಾಗಿದ್ದು, ಹೆತ್ತ ಕರಳು ಮರಗುತ್ತಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಈ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾದ ಕೇವಲ 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯವಾಗಿದೆ. ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಯುವತಿ ಶಿಲ್ಪಾ ವಿಕ್ರಂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ಹಾಗೂ ಗಂಗಾವತಿ ತಾಲೂಕಿನ ಸಾಣಾಪುರದ ವಿಕ್ರಂ ಕಳೆದ ಒಂದೂವರೆ ವರ್ಷದ ಹಿಂದೆ ಟಿಕ್ಟಾಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮದಲ್ಲಿ ಬಿದ್ದಿದ್ದಾರೆ. ನಂತರ ಕಳೆದ ಡಿಸೆಂಬರ್ ನಲ್ಲಿ ಇಬ್ಬರೂ ಮದುವೆಯಾಗಿದ್ದರು. ಆದರೆ ಬೇರೆ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ವಿಕ್ರಂ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಶಿಲ್ಪಾಳ ಸಾವಿಗೆ ಗಂಡ ವಿಕ್ರಂ, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ನೀಡಿರುವ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಗಂಗಾವತಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.