ಮೈಸೂರು: ಭಾವನ ಜೊತೆ ಪಾರ್ಟಿ ಮಾಡಿ ಈಜಲು ಕೆರೆಗಿಳಿದಿದ್ದ ಯುವಕ ಈಜುತ್ತ ಸುಸ್ತಾಗಿ ಕೆರೆಯಲ್ಲಿ ಮುಳುಗಿ ಮಣಿಕಠ ಎಂಬ 23 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಮೈಸೂರಿನ ಕಾಮನಕೆರೆ ಹುಂಡಿಯ ಕಾಮನ ಕೆರೆಯಲ್ಲಿ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ ಭಾವನ ಜೊತೆ ಪಾರ್ಟಿ ಮಾಡಿ ಈಜಲು ತೆರಳಿದ ಮಣಿಕಂಠ ಕೆರೆಯ ನೀರಿನಲ್ಲಿ ಇಳಿದು ಸ್ವಲ್ಪ ಹೊತ್ತು ಈಜಿದ್ದಾನೆ. ಆದರೆ ನಂತರ ಸುಸ್ತಾಗಿ ಈಜಲು ಬಾರದೆ ಇತ್ತ ದಡವನ್ನು ಸಹ ಸೇರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇನ್ನು ಮಣಿಕಂಠ ಕೆರೆಯಲ್ಲಿ ಮುಳುಗಿರುವ ಸುದ್ದಿ ತಿಳಿದ ಸ್ಥಳೀಯರು ಕೆರೆಯಲ್ಲಿ ಶವವನ್ನು ಹುಡುಕಲು ಆರಂಭ ಮಾಡಿದ್ದಾರೆ ಆದರೆ ಮೃತ ದೇಹ ಸಿಗದೇ ಇದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದ ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಮೃತ ಮಣಿಕಂಠ ದೇಹವನ್ನು ಕೆರೆಯಿಂದ ಹೊರ ತಗೆದಿದ್ದಾರೆ. ಬಳಿಕ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಮಣಿಕಂಠ ಸಾವಿನಿಂದ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತು. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಪಾರ್ಟಿ ಮುಗಿಸಿ ಮನೆ ಸೇರ ಬೇಕಾದ ಯುವಕ ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ದುರಂತ.