ಕೂಗು ನಿಮ್ಮದು ಧ್ವನಿ ನಮ್ಮದು

ಮೊದಲ ಆದ್ಯತೆಯಲ್ಲಿ ನದಿ ದಂಡೆಯ ಹಳ್ಳಿಗಳನ್ನು 100% ಲಸಿಕಾಕರಣ ಮಾಡುವಂತೆ : ಗಣೇಶ್ ಹುಕ್ಕೇರಿ ಆಗ್ರಹ

ಬೆಳಗಾವಿ: ರಾಜ್ಯದಲ್ಲಿ ಮುಂಗಾರುಮಳೆ ಅಬ್ಬರ ಆರಂಭ ಆಗಿರುವ ಹಿನ್ನೆಲೆ, ನದಿ ಪಾತ್ರದ ಹಳ್ಳಿಗಳನ್ನು ಮೊದಲ ಆದ್ಯತೆಯಲ್ಲಿ 100% ಲಸಿಕಾಕರಣ ಮಾಡಬೇಕೆಂದು, ಜಿಲ್ಲಾ ಉಸ್ತುವರಿ ಸಚಿವ ಗೋವಿಂದ್ ಕಾರಜೋಳ ಅವರಿಗೆ ಶಾಸಕ ಗಣೇಶ್ ಹುಕ್ಕೇರಿ ಮನವಿ ಮಾಡಿದ್ದಾರೆ.

ಕೊರೊನಾ ಹಾಗೂ ಪ್ರವಾಹ ಮುನ್ನೆಚ್ಚರಿಕೆ ಹಿನ್ನೆಲೆ, ಚಿಕ್ಕೋಡಿ ಉಪವಿಭಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರಲ್ಲಿ ಬೆಳಗಾವಿ ಜಿಲ್ಲಾ ಉಸ್ತುವರಿ ಸಚಿವ ಗೋವಿಂದ್ ಕಾರಜೊಳ ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಪ್ರವಾಹ ಎದುರಾದರೆ ನದಿ ಪಾತ್ರದ ಹಳ್ಳಿಗಳ ಜನರನ್ನು ಬೇರೆ ಹಳ್ಳಿಗಳಿಗೆ ಶಿಫ್ಟ್ ಮಾಡಬೇಕಾಗುತ್ತದೆ, ಕೊರೊನಾ ಸಂಕಷ್ಟದಲ್ಲಿ ಜನರನ್ನು ಶೀಪ್ಟ್ ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡಿದರೆ ಮಾತ್ರ ಕೊರೊನಾ ಹಾವಳಿಯಿಂದ ತಪ್ಪಿಸಬಹುದು, ಇಲ್ಲವಾದರೆ ಬಹಳ ದೊಡ್ಡ ಅನಾಹುತ ಆಗುವ ಸಾಧ್ಯತೆ ಇದೆ ಎಂಬುವುದನ್ನು ಸಭೆಯಲ್ಲಿ ವಿವರಿಸಿದ್ದೆನೆ ಎಂದು ತಿಳಿಸಿದರು.

ಇನ್ನೂ ಚಿಕ್ಕೋಡಿಗೆ ಮಂಜೂರು ಆಗಿರುವ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಇದುವರೆಗೂ ಪ್ರಾರಂಭ ಆಗಿಲ್ಲ, ಆದಷ್ಟು ಬೇಗ ಕೆಲಸ ಪ್ರಾರಂಭಿಸಲು ಸಂಭಂಧಪಟ್ಟ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚನೆ ಕೊಡುವಂತೆ ಸಭೆಯ ಗಮನ ಸೆಳೆದಿರುವುದಾಗಿ ಹೇಳಿದರು.

ನದಿ ಪಾತ್ರದ ಜನರ ಅನಕೂಲಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಮೂರು ಧೋಣಿಗಳನ್ನು ನೀಡಲಾಗಿದ್ದು. ಇನ್ನೂ ಎರಡು ಧೋಣಿಗಾಗಿ ಟೆಂಡರ್ ಕರೆದಿದ್ದು ಒಂದು ವಾರದೊಳಗೆ ಜನರ ಅನಕೂಲಕ್ಕೆ ನೀಡಲಾಗುತ್ತದೆ ಎಂದು ಶಾಸಕ ಹುಕ್ಕೇರಿ ತಿಳಿಸಿದರು.

ಮಾನ್ಯ ಮುಖ್ಯಮಂತ್ರಿಗಳು ನನ್ನ ಮನವಿಗೆ ಸ್ಪಂದಿಸಿ ಚಿಕ್ಕೋಡಿ ಪಟ್ಟಣದಲ್ಲಿ ಆರ್.ಟಿ.ಪಿ.ಸಿ.ಆರ್ ಸೆಂಟರ್ ಆರಂಭಕ್ಕೆ ಒಪ್ಪಿಗೆ ನೀಡಿರುವ ಹಿನ್ನೆಲೆ ಈಗಾಗಲೇ ನಿರ್ಮಾಣ ಕಾರ್ಯ ನಡೆಯುತ್ತಿದ್ದೂ ಮುಂದಿನ ಒಂದು ವಾರದೊಳಗೆ ಉದ್ಘಾಟನೆ ಮಾಡಲಾಗುವುದು ಎಂದು ಶಾಸಕ ಗಣೇಶ್ ಹುಕ್ಕೇರಿಯವರು ತಿಳಿಸಿದರು.

ಇನ್ನೂ ಕಳೆದ ಬಾರಿಯ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಮನೆ ಕಳೆದಕೊಂಡವರಿಗೆ ಪರಿಹಾರ ಸಿಕ್ಕಿಲ್ಲ ಎಂಬ ವಿಚಾರವನ್ನ ಇವತ್ತಿನ ಸಭೆಯಲ್ಲಿ ಮಂಡಿಸಿರುವ ಹಿನ್ನೆಲೆ, ತಹಶಿಲ್ಧಾರ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ನೇರವಾಗಿ ಪರಿಹಾರ ಕಂಡುಕೊಳ್ಳುವುದಕ್ಕೆ ಜಿಲ್ಲಾ ಉಸ್ತುವರಿ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಎಂದು ಶಾಸಕ ಹುಕ್ಕೇರಿ ತಿಳಿಸಿದರು.

error: Content is protected !!