ಕೂಗು ನಿಮ್ಮದು ಧ್ವನಿ ನಮ್ಮದು

ತೊಗರಿಯ ಕಣಜ ಕಲಬುರಗಿ ನಗರದಲ್ಲಿ ಆಟೋ ಡ್ರೈವರ್ ಹತ್ಯೆ!ಆ ಒಂದು ಚಟ ಕಾರಣವೇ?

ಕಲಬುರಗಿ: ಆತ ಆಟೋ ಚಾಲಕ ದಿನ ಬೆಳಗಾದರೆ ಸಾಕು ಆಟೋ ಚಾಲನೆ ಮಾಡಿ ಬಂದಂತಹ ಹಣದಿಂದ ಜೀವನ ಸಾಗಿಸ್ತಾಯಿದ್ದ. ಆದರೆ ಕಳೆದ ರಾತ್ರಿ ಮಾತ್ರ ಆತ ಸ್ನೇಹಿತರ ಜೊತೆ ಹೊರಹೋದವ ಮರಳಿ ಮನೆಗೆ ಬರಲೇ ಇಲ್ಲ. ಅಷ್ಟಕ್ಕೂ ಅಲ್ಲಿ ನಡೆದಿದ್ದಾರೆನು ಅಂತಿರಾ ಈ ಸ್ಟೋರಿ ಓದಿ.

ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ವ್ಯಕ್ತಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಮತ್ತೊಂದೆಡೆ ಪೊಲೀಸರಿಂದ ಸ್ಥಳ ಪರಿಶೀಲನೆ. ಅಷ್ಟಕ್ಕೂ ಇಂತಹದೊಂದು ಭೀಕರ ದೃಶ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದು ತೊಗರಿಯ ಕಣಜ ಕಲಬುರಗಿ ನಗರ. ಹೌದು. ಈ ಫೋಟೊದಲ್ಲಿ ಕಾಣ್ತಿರೋ ವ್ಯಕ್ತಿಯ ಹೆಸ್ರು ಸಂತೋಷ ಗುತ್ತೇದಾರ್ ವಯಸ್ಸು 35 ಕಲಬುರಗಿ ನಗರದ ಜಫರಬಾದ್ ಬಡಾವಣೆ ನಿವಾಸಿ ಅಷ್ಟಕ್ಕೂ ಕುಡಿಯೋದೆ ಹವ್ಯಾಸ ಮಾಡಿಕೊಂಡಿದ್ದ ಸಂತೋಷನಿಗೆ ಎಷ್ಟೆ ಬುದ್ದಿವಾದ ಹೇಳಿದ್ರು ಕುಡಿಯೊದು ಬಿಟ್ಟಿರಲಿಲ್ಲ. ಆದರೂ ಹೇಗೋ ಕುಡಿಯೋದನ್ನ ಬಿಟ್ಟಿದ್ದ ಸಂತೋಷ ಮತ್ತೆ ಕಳೆದೆರಡು ದಿನಗಳಿಂದ ಕುಡಿಯೋದನ್ನ ಮುಂದುವರಿಸಿದ್ದ. ಕಳೆದ ರಾತ್ರಿ ಊಟ ಮಾಡಿದ ನಂತರ ತಂಬಾಕು ತರಲು ಅಂತಾ ಹೊರಹೋಗಿದ್ದ.. ಈ ವೇಳೆ ಸಂತೋಷನ ಸ್ನೇಹಿತರು ಆಟೋದಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆತನಿಗೆ ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಕೃತ್ಯ ತಮ್ಮ ಮೇಲೆ ಬರಬಾರದು ಅಂತಾ ಶವವನ್ನ ಸಂತೋಷನ ಮನೆಯ ಬಳಿಯೇ ಬಿಸಾಕಿ ಪರಾರಿಯಾಗಿದ್ದಾರೆ..

ಇನ್ನೂ ಕೊಲೆಯಾದ ಸಂತೋಷನ ಸ್ನೇಹಿತರು, ನಿಮ್ಮ ಅಪ್ಪ ಆಸ್ತಿ ಮಾರ್ತಿದಾನೆ ಅಂತಾ ಕಿವಿ ಊದಿದ್ದರು.. ಆಗ ಕಂಠಪೂರ್ತಿ ಕುಡಿದು ಬಂದು ತನ್ನ ತಂದೆಯನ್ನೆ ಹೊಡೆದಿದ್ದ ಎನ್ನಲಾಗಿದೆ.. ತಂದೆಯನ್ನೆ ಹೊಡೆತಿಯಾ ಅಂತಾ ಸಂತೋಷನ ಅಣ್ಣ ಬೈಯ್ದು ಬುದ್ದಿವಾದ ಹೇಳಿದ್ದ.. ನಂತರ ಸಂತೋಷ ಊಟ ಮಾಡಿ ಮಲಗಿದ್ದ.. ಈ ವೇಳೆ ತಂಬಾಕು ತರಲು ಮನೆಯಿಂದ ಹೊರಹೋಗಿದ್ದ ಸಂತೋಷನಿಗೆ ಆತನ ಸ್ನೇಹಿತ ಅಶೋಕ ಮತ್ತು ಇನ್ನೂಳಿದ ಮೂವರು ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಕಂಠಪೂರ್ತಿ ಕುಡಿದಿದ್ದಾರೆ ನಿಮ್ಮ ಅಪ್ಪ ಆಸ್ತಿ ಮಾರ್ತಿದಾನೆ. ನೀನು ನಿಮ್ಮ ಅಪ್ಪನಿಗೆ ಯಾಕೆ ಹೊಡೆದಿಲ್ಲ ಅಂತಾ ಸ್ನೇಹಿತರು ಪ್ರಶ್ನಿಸಿದ್ದಾರೆ. ಈ ವೇಳೆ ಸಂತೋಷ ಮತ್ತು ಆತನ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ನಂತರ ಸಂತೋಷನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇನ್ನೂ ಮನೆಯ ಬಳಿಯೇ ಶವ ಬಿದ್ದಿದ್ದ‌ನ್ನ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ‌ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಅದೆನೇ ಇರಲಿ, ಮಳೆ ನಿಂತರು ಮಳೆ ಹನಿ‌ ನಿಲ್ಲಲ್ಲ ಎಂಬಂತೆ ತೊಗರಿಯ ಕಣಜ ಕಲಬುರಗಿಯಲ್ಲಿ ವಾರಾಂತ್ಯದಲ್ಲಿ ಮೂರು ಕೊಲೆಗಳು ನಡೆದಿರೋದನ್ನ ಕಂಡು ಸಾರ್ವಜನಿಕರು ಬೆಚ್ಚಿಬಿಳುವಂತೆ ಮಾಡಿದೆ. ಇನ್ನಾದರು ‌ಪೊಲೀಸರು ಕಠಿಣ ಕ್ರಮಗಳನ್ನ ಕೈಗೊಂಡು ಇಂತಹ ಘಟನೆಗಳಿಗೆ ಬ್ರೇಕ್ ಹಾಕಬೇಕಿದೆ.

error: Content is protected !!