ಬೆಂಗಳೂರು: ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿದ್ದ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8 ಮತ್ತೆ ಗ್ರ್ಯಾಂಡ್ ಸಂಚಿಕೆ ಮೂಲಕ ಇಂದು ಸಂಜೆಯಿಂದ ಆರಂಭವಾಗ್ತಿದೆ. ಬಿಗ್ ಬಾಸ್ ಮನೆಯಲ್ಲಿರುವ ಮುಖ್ಯದ್ವಾರದ ಮೂಲಕ ಸ್ಪರ್ಧಿಗಳು ಒಳಗೆ ಹೋಗುವುದು ಹಾಗೂ ಎಲಿಮಿನೇಟ್ ಆದಾಗ ಹೊರಗೆ ಬರುತ್ತಿದ್ದರು. ಆದರೆ ಈ ಸಲ ಸ್ಪರ್ಧಿಗಳನ್ನು ಬೇರೆ ಬೇರೆ ದ್ವಾರಗಳ ಮೂಲಕ ಮನೆ ಒಳಗೆ ಕಳುಹಿಸಲಾಗಿದೆ.
ಆದ್ರೆ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದ್ದು, ಮೊದಲ ದಿನವೇ ಮನೆಯಲ್ಲಿ ನಾರಿಯರ ನಡುವೆ ಬಿಗ್ ಫೈಟ್ ನಡೆದಿದೆ. ಹೌದು ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಪರಸ್ಪರ ಜಡೆ ಎಳೆದಾಡಿಕೊಂಡು ಹೊಡೆದಾಡಿಕೊಂಡಿರುವುದು ವಿಡಿಯೋದಲ್ಲಿ ಗೊತ್ತಾಗಿದೆ.. ಇಬ್ಬರು ಹೊಡೆದಾಡಿಕೊಂಡು ನೆಲದ ಮೇಲೆ ಬಿದ್ದು ಕಿತ್ತಾಡಿಕೊಂಡಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಫೈಟ್ ನಡೆದಿದೆ ಅನ್ನೋದು ಸಂಚಿಕೆ ಪ್ರಸಾರವಾದ ನಂತರಷ್ಟೇ ಗೊತ್ತಾಗಬೇಕಿದೆ. ಈಗಾಗಲೇ ಮನೆಯಿಂದ ಹೊರ ಹೋಗಿ, ಈ ಹಿಂದೆ ನಡೆದಿರುವ ಎಪಿಸೋಡ್ಗಳನ್ನು ನೋಡಿರುವ ಸ್ಪರ್ಧಿಗಳು ಯಾರು ನಿಜವಾದ ಸ್ನೇಹಿತರು ಹಾಗೂ ಏನೆಲ್ಲ ಹಿಂದೆ ಮಾತನಾಡಿದ್ದಾರೆ ಅಂತ ತಿಳಿದುಕೊಂಡು ಮನೆಗೆ ಬಂದಿದ್ದಾರೆ.
ಹೀಗಿರುವಾಗ ಆಟ ಇನ್ನಷ್ಟು ರೋಚಕತೆ ಪಡೆಯಲಿದೆ. ಆಟದಲ್ಲಿ ಈ ಬಾರಿ ಯಾವುದಾದ್ರೂ ಬದಲಾವಣೆಗಳು ಆಗುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ರಘು ಗೌಡ, ವೈಷ್ಣವಿ ಗೌಡ, ಶಮಂತ್ ಗೌಡ ಮತ್ತೆ ಗ್ರ್ಯಾಂಡ್ ಎಂಟ್ರಿ ಪಡೆಯುತ್ತಿದ್ದಾರೆ.