ಕೂಗು ನಿಮ್ಮದು ಧ್ವನಿ ನಮ್ಮದು

ಪೂರ- ಅರ್ಲವಾಡ ರೈಲ್ವೆ ಗೇಟ್ ಮುಖಾಂತರ ಸಂಚಾರಕ್ಕೆ ಅನುಮತಿ ನೀಡಲು ಆಗ್ರಹ

ಬೆಳಗಾವಿ: ಕಳೆದ ಸುಮಾರು ವರ್ಷಗಳಿಂದ ರೈತರು ಊರಿನ ಗ್ರಾಮಸ್ಥರು ಕೂಲಿಕಾರ್ಮಿಕರು ಹಾದು ಹೋಗುವ ಪೂರ- ಅರ್ಲವಾಡ ರೈಲ್ವೆ ಗೇಟ್ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗೇಟ್ ಅನ್ನು ನಿರ್ಮಿಸಿರುತ್ತಾರೆ. ಆದರೆ ಈಗ ಏಕಾ ಏಕಿ ರೈಲ್ವೆ ಗೇಟ್ ಖಾಯಂ ಬಂದ ಮಾಡಲಾಗುತ್ತದೆ.
ನೀವು ಬೇರೆ ದಾರಿ ನೋಡಿ ಎಂದು ಕೂಲಿಕಾರ್ಮಿಕರಿಗೆ ರೈತರಿಗೆ ಮತ್ತು ಗ್ರಾಮಸ್ಥರಿಗೆ ರೈಲ್ವೆ ಇಲಾಖೆ ಗೇಟ್ ಎದುರುಗಡೆ ಹಾಕಿದೆ. ಆದ್ದರಿಂದ ನಮ್ಮೂರಿನ ಎಲ್ಲ ಗ್ರಾಮಸ್ಥರಿಗೆ ರೈಲ್ವೆಗೇಟ್ ಮುಖಾಂತರ ಹಾದು ಹೋಗಲು ಅನುಕೂಲ ಮಾಡಿಕೊಡಬೇಕೆಂದು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಗ್ರಾಮಸ್ಥ ಪಾಂಡುರಂಗ ಪಾಟೀಲ್ ಆಗ್ರಹಿಸಿದ್ದಾರೆ.

ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪೂರ ಗ್ರಾಮದ ಹತ್ತಿರವಿರುವ ಪೂರ- ಅರ್ಲವಾಡ ರೈಲ್ವೆ ಗೇಟ್ ಖಾಯಂ ಚಾಲೂ ಮಾಡಲು ಆಗ್ರಹಿಸಿ ಪ್ರತಿಭಟಿಸಿ ಮಾತನಾಡಿದರು. ಪೂರ- ಅರ್ಲವಾಡ ರೈಲ್ವೆ ಗೇಟ್ ಬಹಳ ವರ್ಷಗಳಿಂದ ಚಾಲು ಇದೆ ಮುಖಾಂತರ ಕೂಲಿ ಕಾರ್ಮಿಕರು, ರೈತರು ಮತ್ತು ಗ್ರಾಮಸ್ಥರು ಹಾದುಹೋಗುವ ಮುಖಾಂತರ ತಮ್ಮ ಉಪಜೀವನ ನಡೆಸುತ್ತಿದ್ದಾರೆ. ಜೊತೆಗೆ ಈ ರಸ್ತೆಯ ಮುಖಾಂತರ ಹಾದು ಹೋಗಿ ಸುಮಾರು ಎರಡು ನೂರಕ್ಕೂ ಅಧಿಕ ಎಕರೆ ಭೂಮಿಯ ಉಳುಮೆ ಮಾಡುವ ಕೆಲಸ ರೈತರು ಮಾಡುತ್ತಾರೆ. ಇದರ ಜೊತೆಗೆ ಈ ಭೂಮಿಯಲ್ಲಿ ಕೂಲಿ ಕಾರ್ಮಿಕರು ದುಡಿಯುವ ಕಾರ್ಯವನ್ನು ಕೂಡ ಮಾಡುತ್ತಾರೆ. ಆದರೆ ಈ ರಸ್ತೆಯ ಮುಖಾಂತರ ದ್ವಿಚಕ್ರವಾಹನ, ರೈತರ ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಕಬ್ಬು ತುಂಬಿದ ಲಾರಿ ಈ ರಸ್ತೆಯ ಮುಖಾಂತರವೇ ಸಂಪರ್ಕಿಸಬೇಕು. ಒಂದು ವೇಳೆ ಏಕಾಏಕಿ ಗೇಟನ್ನು ಮುಚ್ಚಿದರೆ ಗ್ರಾಮಸ್ಥರು ಸುಮಾರು ಎರಡು ಕಿಲೋಮೀಟರ್ ದೂರದ ರಸ್ತೆ ಸುತ್ತು ಹಾಕಿ ಗ್ರಾಮಕ್ಕೆ ಬರಬೇಕು. ಆದ್ದರಿಂದ ಮೊದಲಿನಿಂದ ಹೀಗೆ ಈ ರಸ್ತೆ ಕಾಯಂ ಚಾಲು ಇದೆಯೋ ಹಾಗೆಯೇ ಇದನ್ನು ಮುಂದುವರಿಸಬೇಕು ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಯಾದ ಪ್ರವೀಣ್ ಆಚಾರ್ಯ ಅವರು ಸ್ಥಳಕ್ಕೆ ಬಂದು ಗ್ರಾಮಸ್ಥರನ್ನು ಸಮಜಾಯಿಸಿ, ನಿಮಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆಯ ಮಾತನ್ನು ಕೊಟ್ಟು ಹೋಗಿರುತ್ತಾರೆ. ಇದರ ಜೊತೆಗೆ ನೀವು ಮಾಡುವ ತಕರಾರು ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ನೀವು ಕೂಡ ಗಮನಕ್ಕೆ ತನ್ನಿರಿ, ಆಗ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಆದರೆ ಅಲ್ಲಿಯವರೆಗೆ ನಾನು ನಿಮಗೆ ಇಲ್ಲಿಂದ ಹಾದು ಹೋಗಲು ಅನುಕೂಲ ಮಾಡಿಕೊಡುತ್ತೇನೆಂದು ಭರವಸೆಯ ಮಾತುಗಳನ್ನು ಹೇಳಿದರು. ಇನ್ನು ಪೂರ್ ಗ್ರಾಮದಲ್ಲಿ ಒಳಗಡೆ ಹೋಗುವ ಮುಂಚಿತವಾಗಿ ಪಕ್ಕದಲ್ಲೇ, ಅಳನಾವರ-ದಾಂಡೇಲಿ ರೈಲ್ವೆ ಮಾರ್ಗ ಹಾದು ಹೋಗಿರುತ್ತದೆ. ಇದರಿಂದ ಗ್ರಾಮಸ್ಥರಿಗೆ ರೈಲ್ವೆ ಗೇಟ್ ದಾಟಿ ಹೋಗಲು ಬಹಳ ಅನಾನುಕೂಲವಾಗುತ್ತಿದೆ. ಇದರ ಜೊತೆಗೆ ಗರ್ಭಿಣಿಯರಿಗೆ ಹಾಗೂ ದವಾಖಾನೆಗೆ ಹೋಗಲು ಸರಿಯಾದ ಸಮಯಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈಲ್ವೆ ಇಲಾಖೆಯವರು ಈಗಾಗಲೇ ಓವರ್ ಬ್ರಿಡ್ಜ್ ಮಾಡಲು ಸ್ಥಳವನ್ನು ಪರೀಕ್ಷಿಸಿ ಹೋಗಿರುತ್ತಾರೆ. ಆದ್ದರಿಂದ ರೈಲ್ವೆ ಇಲಾಖೆಯ ವತಿಯಿಂದ ಗ್ರಾಮದ ಪಕ್ಕದಲ್ಲಿ ಓವರ್ ಬ್ರಿಡ್ಜ್ ಮಾಡಿದರೆ ಬಹಳ ಅನುಕೂಲವಾಗುತ್ತದೆ ಎಂಬುದು ಸಮಸ್ತ ಗ್ರಾಮಸ್ಥರ ಅಭಿಪ್ರಾಯ ಹಾಗೂ ಆಗ್ರಹವಾಗಿದೆ. ಇದರ ಜೊತೆಗೆ ಓವರ್ ಬ್ರಿಡ್ಜ್ ಆದನಂತರ ಗ್ರಾಮದ ಮುಂಭಾಗದಲ್ಲಿರುವ ರೈಲ್ವೆ ಗೇಟ್ ಹಾಗೂ ರೈತರು ಸಂಪರ್ಕಿಸುವ ಪೂರ್ವ ರೈಲ್ವೆ ಗೇಟನ್ನು ತೆಗೆದರೂ ನಡೆಯುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪಾಂಡುರಂಗ ಪಾಟೀಲ್, ಗ್ರಾಮಸ್ಥರಾದ ನಾರಾಯಣ್ ಮಲಿಕ್, ಅರುಣ್ ಪಾಟೀಲ್, ಅನಿಲ್ ಪಾಟೀಲ್, ರಾಮ ಬೀಡಿಕರ, ಪರುಶುರಾಮ್ ಮೀಟಗಾರ್, ಶೀತಲ್ ತಿಗಡೊಳ್ಕರ್, ಲಕ್ಷ್ಮಿ ಮಾಳವಿ, ಹಾಗೂ ಗ್ರಾಮದ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!