ಕೂಗು ನಿಮ್ಮದು ಧ್ವನಿ ನಮ್ಮದು

ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕರೆ ನೀಡಿದ ಬೆಳಗಾವಿ ಅಂಜುಮನ್ ಏ ಇಸ್ಲಾಂ ಅಧ್ಯಕ್ಷ ಆಸಿಫ್ ಸೇಠ್

ಬೆಳಗಾವಿ : ಕೋವಿಡ್ 19 ರೋಗವನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಸಮಾಜದ ಎಲ್ಲ ಬಾಂಧವರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಅಂಜುಮನ್ ಏ ಇಸ್ಲಾಂ ಬೆಳಗಾವಿ ಅಧ್ಯಕ್ಷ ಆಸಿಫ್ ಸೇಠ್ ಮನವಿ ಮಾಡಿಕೊಂಡಿದ್ದಾರೆ. ವ್ಯಾಕ್ಸಿನ್ ಕುರಿತು ಅನೇಕ ಊಹಾಪೋಹಗಳನ್ನ ಹರಡಲಾಗಿದ್ದು ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯದ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ  ಆಸಿಫ್ ಸೇಠ್ ನೇತೃತ್ವದ ತಂಡ ಹಲವು ಕಾರ್ಯಕ್ರಮ ರೂಪಿಸಿಕೊಂಡಿದ್ದು, ಈಗ ವ್ಯಾಕ್ಸಿನ್ ಡ್ರೈವ್ ಗೆ ಸಾರ್ವಜನಿಕರಿಗೆ ಬುಲಾವ್ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳನ್ನ ಸಂಪರ್ಕಿಸಿ ವ್ಯಾಕ್ಸಿನ್ ಡ್ರೈವ್ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಕೂಡ ಮಾಡಿಕೊಂಡಿದ್ದರು, ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನನ್ನು ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಅಂಜುಮನ್ ಎ ಇಸ್ಲಾಂ ಬೆಳಗಾವಿ ನಡೆಸಿಕೊಡಲಿದ್ದು, ಆಧಾರ್ ಕಾರ್ಡ್ ನೊಂದಿಗೆ ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ರೋಗ ಉಲ್ಬಣಿಸಿದ ಸಮಯದಲ್ಲಿ ಇದೆ ಅಂಜುಮನ್ ಕಮಿಟಿ ಕೋವಿಡ್ ಆಸ್ಪತ್ರೆ  ತೆರೆದು ನೂರಾರು ಜನರಿಗೆ ಉಚಿತ ಚಿಕೆತ್ಸೆ ನೀಡುತ್ತಿದ್ದು ಇನ್ನು ಕೂಡ ಮುಂದುವರೆದಿದೆ. ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎನ್ನುವ ಅಂಶವನ್ನು ತಜ್ಞರು ನೀಡಿರುವ ಹಿನ್ನಲೆ ಸದ್ಯ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬೇಕು ವದಂತಿಗಳಿಗೆ ಕಿವಿ ಕೊಡಬೇಡಿ ಯಾವುದೇ ಸಂಕಷ್ಟ ಇದ್ದರು ಅನುಮಾನ ಇದ್ದರು ನಮ್ಮನ್ನು ಸಂಪರ್ಕಿಸುವಂತೆ  ಅಂಜುಮನ್ ಏ ಇಸ್ಲಾಂ ಬೆಳಗಾವಿ ಕಮಿಟಿ ಅಧ್ಯಕ್ಷ ರಾದ ಆಸಿಫ್ ಸೇಠ್ ಮನವಿ ಮಾಡಿದ್ದಾರೆ.

error: Content is protected !!