ಕೂಗು ನಿಮ್ಮದು ಧ್ವನಿ ನಮ್ಮದು

2 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ: ಪ್ರಗತಿ ಪರಿಶೀಲಿಸಿದ ಮುಖಂಡರು

ಬೆಳಗಾವಿ: ಸುಮಾರು 25 ವರ್ಷಗಳ ಬೇಡಿಕೆಯಾಗಿದ್ದ ಹಿರೇಬಾಗೇವಾಡಿಯ ಗುಳ್ಳವನ ಕೆರೆಯ ಅಭಿವೃದ್ಧಿಯ ಕಾಮಗಾರಿಗಳು ಅಂದಾಜು 2 ಕೋಟಿ ರೂ ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ 25 ವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕೆರೆಯ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆ ವತಿಯಿಂದ 2 ಕೋಟಿ ರೂ, ಗಳ ವೆಚ್ಚದಲ್ಲಿ ಈ ಕೆರೆಯ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದು, ಆದಷ್ಟು ಬೇಗ ಕೆರೆ ಸೌಂದರ್ಯಿಕರಣಗೊಳ್ಳಲಿದೆ

ಈ ಕೆರೆಯು ವಾಕಿಂಗ್ ಟ್ರ್ಯಾಕ್, ಸುತ್ತಮುತ್ತ ದೀಪಗಳ ಅಳವಡಿಕೆ, ಸಾರ್ವಜನಿಕ ಆಸನಗಳ ವ್ಯವಸ್ಥೆ, ಬಟ್ಟೆ ಹಾಗೂ ವಾಹನಗಳನ್ನು ತೊಳೆಯಲು ಮತ್ತು ಗಣೇಶ ವಿಸರ್ಜನೆಗೆ ಪ್ರತ್ಯೇಕ ಭಾಗಗಳಾಗಿ ವಿಂಗಡಿಸಲಾಗಿದೆ. ಕೆರೆಯ ಅಭಿವೃದ್ಧಿಗೆ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದ್ದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವೇಳೆ ಅನೇಕರು ಇದ್ದರು.

error: Content is protected !!