ಕೂಗು ನಿಮ್ಮದು ಧ್ವನಿ ನಮ್ಮದು

ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಪ್ರಚೋದಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಭರಮಸಾಗರ ಪೊಲೀಸರ ವಶಕ್ಕೆ

ಚಿತ್ರದುರ್ಗ: ಭರಮಸಾಗರದ ಅರಭಘಟ್ಟ ಗ್ರಾಮದ ಆರೋಪಿ ಬಸವರಾಜ್ ಮತ್ತು ಮುರುಗೇಶ್ ಇಬ್ಬರು ಸ್ನೇಹಿತರು, ವಿರೇಶ್ ಹಾಗೂ ಪತ್ನಿ ನಾಗಮ್ಮ ಇಬ್ಬರ ಜೀವನದಲ್ಲಿ ಸಾಮರಸ್ಯ ಇರಲಿಲ್ಲ ಇದನ್ನೆ ಬಳಸಿಕೊಂಡಿದ್ದ ಬಸವರಾಜ್ ಹಾಗೂ ನಾಗಮ್ಮ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ನಾಗಮ್ಮ ಗಂಡ ಮುರುಗೇಶ್ ನನ್ನು ಕೊಲೆ ಮಾಡಿಸಲು ಆರೋಪಿ ಬಸವರಾಜ್ ನೊಂದಿಗೆ ಪೂರ್ವ ನಿಯೋಜಿತ ಸಂಚು ರೂಪಿಸಿರುತ್ತಾಳೆ. ತನಗೆ ಹೊಟ್ಡೆ ನೋವು ಎಂದು ಸುಳ್ಳು ನೆಪ ವೊಡ್ಡಿ ಗಂಡ ಮುರುಗೇಶನನ್ನು ಭರಮಸಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೇಳುತ್ತಾಳೆ. ಹೊಟ್ಟೆ ನೋವು ಎಂದು ಹೇಳಿದ್ದ ಪತ್ನಿ‌ ನಾಗಮ್ಮಳ ಮಾತು ಕೇಳಿದ ಮುರುಗೇಶ್ ಆಸ್ಪತ್ರೆ ಗೆ ಕರೆದುಕೊಂಡು ಬರುವ ಮಾರ್ಗ ಮಧ್ಯದಲ್ಲಿ ಹೆಗ್ಗೆರೆ ಬಳಿಯ‌ ಮಟ್ಟಿ ಬಳಿ‌ ಮರೆಯಲ್ಲಿ‌ನಿಂತು ಹಲ್ಲೆ ನಡೆಸುವಂತೆ ಪ್ರಿಯಕರ ಹಾಗೂ ಆರೋಪಿ ಬಸವರಾಜ್ ಗೆ ಹೇಳಿರುತ್ತಾಳೆ ಅದರಂತೆ ಬಸವರಾಜ್ ಹಲ್ಲೆ ಮಾಡಲು ಯತ್ನಿಸಿ ವಿಫಲನಾಗಿರುತ್ತಾನೆ. ಇನ್ನೊಂದು ಬಾರಿ ಬಸವರಾಜ್ ಮುರುಗೇಶನಿಗೆ ದೂರವಾಣಿ ಕರೆ ಮಾಡಿ ಮಧ್ಯ ಸೇವನೆ ಮಾಡಲು ಕರೆಯುತ್ತಾನೆ ಸ್ನೇಹಿತ ಕರೆಯ ಮೇರೆಗೆ ಬಂದಿದ್ದ ಮುರುಗೇಶ್ ನನ್ನು ಕರೆದುಕೊಂಡು ಇಬ್ಬರು ಕುಡಿಯುತ್ತಾರೆ ಮಧ್ಯದ ಅಮಲಿನಲ್ಲಿದ್ದ ಮುರಿಗೇಶ್ ನನ್ನು ಬಸವರಾಜ್ ಪಕ್ಕದಲ್ಲಿದ್ದ. ಕೃಷಿ ಹೊಂಡಕ್ಕೆ ತಳ್ಳಿ ಕೊಲೆ ಮಾಡಿರುತ್ತಾನೆ. ಈ ಬಗ್ಗೆ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮುರುಗೇಶನ ತಂದೆ ಮಹಾ ರುದ್ರಪ್ಪ ಕೂಡ ಕೊಲೆಯ ಶಂಕೆಯನ್ನು ವ್ಯಕ್ತಪಡಿಸಿದ್ದು, ಪೋಲಿಸರು ತನಿಖೆ ನಡೆಸುವ ಸಮಯದಲ್ಲಿ ಮುರುಗೇಶ್ ಜೇಬಿನಲ್ಲಿ ಸಿಕ್ಕ ಪತ್ರದಲ್ಲಿ ಬಸವರಾಜ್ ಹಾಗೂ‌ ನಾಗಮ್ಮಳಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಮುರುಗೇಶ್ ಬರೆದುಕೊಂಡಿದ್ದು,ಇದರಿಂದ ಅಕ್ರಮ ಸಂಬಂಧಕ್ಕೆ ಮುರುಗೇಶ್ ಅಡ್ಡಿಯಾಗಿದ್ದು ಅವನನ್ನು ಮುಗಿಸಲು ನಾಗಮ್ಮ ಹಾಗೂ ಬಸವರಾಜ್ ಇಬ್ಬರು ಕೊಲೆ ಮಾಡಿರುವುದು ದೃಡಪಟ್ಟಿದೆ. ಭರಮಸಾಗರ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.

error: Content is protected !!