ಕೊಪ್ಪಳ: ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣನೂ ಇಲ್ಲ, ಡಿಕೆಶಿ ಬಣನೂ ಯಾವುದೂ ಇಲ್ಲ ಅಖಿಲ ಕಾಂಗ್ರೆಸ್ ಭಾರತ ಬಣ ಒಂದೇ ಇರುವುದು. ಮತ್ತು ಕೊಪ್ಪಳ ಕಾಂಗ್ರೆಸ್ ನಿಂದ ಹೊರಹೋದ ಶಾಸಕರನ್ನು ಮತ್ತು ಪಕ್ಷಕ್ಕೆ ದ್ರೋಹ ಮಾಡಿ ಹೋಗಿ ಬಿಜೆಪಿ ಸರಕಾರ ರಚನೆಗೆ ಕಾರಣರಾದವನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳಲ್ಲ
ಎಂದು ಕೊಪ್ಪಳದಲ್ಲಿ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಪುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಹೇಳಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗುವುದರ ಬಗ್ಗೆ ಹೇಳಿಯೇ ಹೋಗಿದ್ದಾರೆ, ಅವರ ಪರ್ಸನಲ್ ಕೆಲಸ ಇದೆ ಅಂತಾ ಹೇಳ್ಬಿಟ್ಟು ಹೋಗಿದ್ದಾರೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮತ್ತು ಸಿಎಂ ಯಡಿಯೂರಪ್ಪನವರ ಬೆಂಬಲಕ್ಕೆ ಸಿದ್ಧರಾಮಯ್ಯ ಬರ್ತಾರೆ ಎಂಬುದು ಹಸಿ ಸುಳ್ಳು ಅಂತಾ ಹೇಳಿದ್ದಾರೆ.