ಕೂಗು ನಿಮ್ಮದು ಧ್ವನಿ ನಮ್ಮದು

ಝೋಮ್ಯಾಟೋ ಡೆಲಿವರಿ ಬಾಯ್ ಗೆ ಸಿಕ್ಕಿತು ಅವಿಸ್ಮರಣೀಯ ಉಡುಗೊರೆ: ಆ ಉಡುಗೊರೆ ಏನು ಅಂತೀರಾ ಈ ಸ್ಟೋರಿ ನೋಡಿ

? ಸುಭಾನಿ ಎಂ ಹುಕ್ಕೇರಿ

ಹೈದರಾಬಾದ್: ಕೆಲವು ಸಲ ನಾವು ಈ ಆಹಾರ ವಿತರಿಸುವ ಹುಡುಗರ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸುವುದು ಒತ್ತಟ್ಟಿಗಿರಲಿ ಒಂದು ಚಿಕ್ಕ ಥಾಂಕ್ಸ್ ಸಹ ಹೇಳಲ್ಲ. ಆದರೆ ಪಕ್ಕದ ಹೈದರಾಬಾದಿನಲ್ಲಿ ಅತೀ ವೇಗದ ವಿತರಣೆಗೆ ಮನಸೋತ ವ್ಯಕ್ತಿಯೊಬ್ಬರು ಆ ಹುಡುಗನಿಗೆ ಬೈಕ್ ಖರೀದಿಸಿ ಕೊಟ್ಟಿದ್ದಾರೆ. ಆ ಮೂಲಕ Delivery boy ಗಳನ್ನು ನೋಡುವ ದೃಷ್ಟಿಕೋನಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಹೈದರಾಬಾದಿನ ರುಬಿನ್ ಮುಖೇಶ್ ಎಂಬುವವರು Zomato ದಲ್ಲಿ ಆರ್ಡರ್ ಬುಕ್ ಮಾಡಿದ್ದರು. ಆರ್ಡರ್ ಬುಕ್ ಮಾಡಿದ 20 ನಿಮಿಷದ ನಂತರ Delivery ಪಡೆಯಲು Delivery ಏಜೆಂಟ್ Mohd.Aqeel Ahmed ಬಳಿ ಹೋದರು. ಡೆಲಿವರಿ ಪಡೆದ ರೂಬಿನ್ ಗೆ ಆಶ್ಚರ್ಯ ಕಾದಿತ್ತು. ಡೆಲಿವರಿ ಮಾಡಿದ ಅಕಿಲ್ ಸೈಕಲ್ ಮೇಲೆ ಬಂದಿದ್ದ. ಆತನ ಬಳಿ ಕೇವಲ ಸೈಕಲ್ ಮಾತ್ರ ಇತ್ತು. 9ಕಿಮೀ ಅಂತರವನ್ನು ಕ್ರಮಿಸಲು ಆತ ತೆಗೆದುಕೊಂಡಿದ್ದು ಕೇವಲ 20 ನಿಮಿಷ ಮಾತ್ರ. ಪ್ಯಾಡಲ್ ತುಳಿದ ಪರಿ ಹೇಗಿರಬೇಡ?

ಆತನ ಸಮಯ ಪ್ರಜ್ಞೆಗೆ ರುಬೆನ್ ಮನಸೋತ. ಆತನಿಗೆ ಕೇವಲ ಥಾಂಕ್ಸ್ ಹೇಳಿ ಸುಮ್ಮನಾಗದೇ ಆತನ ವೇಗದ ಫುಡ್ ಡೆಲಿವರಿ ಬಗ್ಗೆ ಬರೆದು ಆತನ ಸೈಕಲ್ ಫೋಟೋ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕ್ಯಾಂಪೇನ್ ಮಾಡಿದ. ಈತನಿಗೆ ಒಂದು ಬೈಕ್ ಕೊಡಿಸಲು ಜನರ ಬಳಿ ಚಂದಾ ಕೇಳಿದ. ಏನಾಶ್ಚರ್ಯ? ಕೇವಲ ಹತ್ತು ತಾಸಿನಲ್ಲಿ ರೂಬೆನ್ ಖಾತೆಗೆ 60000/-ರೂ. ಬಂದು ಬಿದ್ದಿತು. ರುಬೇನ್ ಕ್ಯಾಂಪೇನ್ ಬಂದ್ ಮಾಡುವ ಸಮಯದಲ್ಲಿ ಆತನ ಖಾತೆಗೆ ಹಿತೈಷಿಗಳು 73,370/- ರೂ ಹಾಕಿದ್ದರು.

ಅದರಲ್ಲಿ 65000/- ಕೊಟ್ಟು ಟಿವಿಎಸ್ XL bike ಖರೀದಿಸಿದ. ಈಗ ಬೈಕ್ ಕೀ ಜೊತೆಗೆ ಮಾಸ್ಕ್ SANITIZER ನ್ನ ಆತನಿಗೆ ಹಸ್ತಾಂತರಿಸಲಾಗಿದೆ. ಮುಂದೆ ಆತನಿಗೆ ಒಂದು ಹೆಲ್ಮೆಟ್ ಮತ್ತು Raincoat ಸಹ ಕೊಡಿಸುವ ಯೋಚನೆ ರುಬೇನ ಗೆ ಇದೆ. ಬೈಕ್ ಖರೀದಿಸಿ ಉಳಿದ ನಗದು ಹಣ ಸಹ ಆಕಿಲ್ ಗೆ ಕೊಟ್ಟಿದ್ದಾರೆ ರುಬೇನ್. ವಾಗ್ದಾನ ಮಾಡಿದಂತೆ ಆತನಿಗೆ ಎಲ್ಲ ಖರೀದಿಸಿ ಕೊಡಲಾಗಿದೆ. ಇದರಿಂದ ಆತನ ಕಾರ್ಯಕ್ಷಮತೆ ಈಗ ಇಮ್ಮಡಿ ಆಗಿದೆ. ಆತನ ಕುಟುಂಬಕ್ಕೆ ಆತನ ಬೆಂಬಲ ಇನ್ನಷ್ಟು ಗಟ್ಟಿಯಾಗುವಂತೆ ಮಾಡಿದೆ.

ಎಂತಹ ಅದ್ಭುತ ಕಥೆ!! ಜೊತೆಗೂಡಿ ಕೈಗೂಡಿಸಿದರೆ ಎಲ್ಲವೂ ಫಲಪ್ರದ. ಅಸಾಧ್ಯ ಯಾವುದೂ ಇಲ್ಲ ಎಂದು ಈ ಘಟನೆ ತೋರಿಸಿಕೊಟ್ಟಿದೆ.

error: Content is protected !!