ಕೂಗು ನಿಮ್ಮದು ಧ್ವನಿ ನಮ್ಮದು

ಕೊರೊನಾ ಸೋಂಕಿತರೊಂದಿಗೆ ಕೊವಿಡ್ ಕೇಂದ್ರದಲ್ಲೇ ಯೋಗ ದಿನಾಚರಣೆ ಆಚರಿಸಿದ ರೇಣುಕಾಚಾರ್ಯ

ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾ, ನಿರಂತರವಾಗಿ ಕ್ಷೇತ್ರದ ಜನರ ಸಹಾಯದಲ್ಲಿದ್ದು ಮೆಚ್ಚುಗೆ ಗಳಿಸಿಕೊಂಡಿರುವ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ, ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸೋಂಕಿತರೊಟ್ಟಿಗೆ ಆಚರಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೊವಿಡ್ ಕೇಂದ್ರಕ್ಕೆ ಆಗಮಿಸಿ ಕೊರೊನಾ ಸೋಂಕಿತರ ಜತೆ ಯೋಗಾಭ್ಯಾಸ ಮಾಡಿದ ರೇಣುಕಾಚಾರ್ಯ, ಅಲ್ಲಿದ್ದವರೆಲ್ಲರಿಗೂ ಯೋಗದ ಮಹತ್ವ ತಿಳಿಸಿದ್ದಾರೆ.ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ. ಸೋಂಕಿನಿಂದ ಗುಣಮುಖರಾದ ಬಳಿಕ ಮನೆಯಲ್ಲೂ ನಿರಂತರ ಯೋಗಾಭ್ಯಾಸ ಮಾಡಿ. ಇದರಿಂದಾಗಿ ನಿಮ್ಮ ಆರೋಗ್ಯದ ಗುಣಮಟ್ಟ ಉತ್ತಮವಾಗಿರಲು ಅನುಕೂಲವಾಗುತ್ತದೆ ಎಂದು ಸೋಂಕಿತರಿಗೆ ರೇಣುಕಾಚಾರ್ಯ ಸಲಹೆ ನೀಡಿದ್ದಾರೆ. ಕೊವಿಡ್ ಕೇಂದ್ರದಲ್ಲಿ ಸೋಂಕಿತರೊಟ್ಟಿಗೆ ವಿವಿಧ ಭಂಗಿಯಲ್ಲಿ ಯೋಗಾಸನ ಮಾಡಿದ ಶಾಸಕರು ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

error: Content is protected !!