ಕೂಗು ನಿಮ್ಮದು ಧ್ವನಿ ನಮ್ಮದು

ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ:ಸಿಎಂ ಬಿಎಸ್‌ವೈ

ಬೆಂಗಳೂರು: ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ ಎಂದು ಯೋಗ ದಿನ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ತಿಳಿಸಿದ್ದಾರೆ. ವಿಶ್ವದ 225ಕ್ಕೂ ಹೆಚ್ಚು ದೇಶಗಳಲ್ಲಿ ಇಂದು ಯೋಗ ಆಚರಣೆ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಯೋಗ ಮಾಡಿ. ಕೊರೊನಾ ಸಂಕಷ್ಟದ ವೇಳೆ ಜನರ ಆರೋಗ್ಯ ಕಾಪಾಡುವಲ್ಲಿ ಯೋಗ ಪಾತ್ರ ಮಹತ್ವದ್ದು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಬಲಗೊಳ್ಳುತ್ತೆ. ಸಮಾಜ ನಿರ್ಮಾಣದಲ್ಲಿ ಯೋಗ ಸಹಕಾರಿಯಾಗಲಿದೆ. ಏಕಾಗ್ರತೆಗೆ ಯೋಗ ಸಹಕಾರಿಯಾಗಲಿದೆ. ಯೋಗ ಔಷಧರಹಿತ ಚಿಕಿತ್ಸಾ ಪದ್ಧತಿಯಾಗಿದೆ. ಯಾವುದೇ ಅಡ್ಡಪರಿಣಾವಿಲ್ಲದ ಚಿಕಿತ್ಸಾ ಪದ್ಧತಿಯಾಗಿದೆ ಎಂದು ಯೋಗ ದಿನ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಹೇಳಿದ್ರು.

error: Content is protected !!