ಕೂಗು ನಿಮ್ಮದು ಧ್ವನಿ ನಮ್ಮದು

ಜೆಡಿಎಸ್ ಕುಟುಂಬ ರಾಕ್ಷಸ ರಾಜಕಾರಣ ಬಿಜೆಪಿಯಲ್ಲೂ ಇದೆ: ಅರುಣ್ ಸಿಂಗ್ ಎದುರು ಗುಡುಗಿದ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್

ಬೆಂಗಳೂರು: ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಮೇಲ್ಮನೆ ಸದಸ್ಯ ಹೆಚ್ ವಿಶ್ವನಾಥ್ ಇದೀಗತಾನೆ ಭೇಟಿ ಮಾಡಿ, ಹೊರಬಂದಿದ್ದಾರೆ. ರಾಜ್ಯದಲ್ಲಿ ಆಗ್ತಿರುವ ಬೆಳವಣಿಗೆ ಬಗ್ಗೆ ಸವಿಸ್ತಾರವಾಗಿ ಹೇಳಿದ್ದೇನೆ. ನಾನು ಯಾವ ಬಣದವನೂ ಅಲ್ಲ. ನಾನು ಯಾರ ಪರವೂ ಇಲ್ಲ, ವಿರೋಧಿಯೂ ಇಲ್ಲ. ಅವರ ಜೊತೆ (ಅರುಣ್ ಸಿಂಗ್) ಮುಕ್ತವಾಗಿ ಚರ್ಚೆ ಮಾಡಿದ್ದೇನೆ. ನನ್ನ ಮಾತನ್ನು ಗಂಭೀರವಾಗಿ ಆಲಿಸಿದ್ದಾರೆ. ಏನೇನು ಆಗುತ್ತದೋ ನೋಡೋಣ ಎಂದು ವಿಶ್ವನಾಥ್ ಹೇಳಿದರು. ಅರುಣ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್ ವಿಶ್ವನಾಥ್ ಅವರು ಜೆಡಿಎಸ್ ಪಕ್ಷದಲ್ಲಿರುವ (JDS) ಕುಟುಂಬ ರಾಜಕಾರಣ ರಾಕ್ಷಸ ರಾಜಕಾರಣ. ಅದನ್ನು ಇಲ್ಲಿಯೂ (ಬಿಜೆಪಿ) ನೋಡ್ತಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಇದೆ. ಆದರೆ ಇಲ್ಲಿ ಸರ್ಕಾರ ಯಾವ ರೀತಿ ನಡೆಯುತ್ತಿದೆ? ಹೈಕಮಾಂಡ್ ಏನು ತೀರ್ಮಾನ ತಗೋಬೇಕು? ಅಂತಾ ಅವರಿಗೆ (ಅರುಣ್ ಸಿಂಗ್) ವಿವರಿಸಿದ್ದೇನೆ ಎಂದರು. ಅಧಿಕಾರದ ಅಪೇಕ್ಷೆಗಾಗಿ ಯಾರ ಬಗ್ಗೆಯೂ ನಾನು ಮಾತಾಡಲ್ಲ. ವಸ್ತುಸ್ಥಿತಿ ಹೇಳಿದ್ದೇನೆ. ಮಂತ್ರಿಗಿರಿ ಸಿಕ್ಕಿಲ್ಲ ಅಂತಾ ಮಾತಾಡ್ತಿದ್ದೇನೆ ಅಂತಾ ಕೆಲವರು ಪಕ್ಷದಲ್ಲಿ ಹೇಳ್ತಿದ್ದಾರೆ, ಆದರೆ ಅದು ಅಲ್ಲ ಅಂತಾ ಸಿಂಗ್ ಗೆ ಹೇಳಿದ್ದೇನೆ. ರಾಜ್ಯ ಮುಖ್ಯ, ಆಡಳಿತ ಮುಖ್ಯ ಅಂತಾ ಹೇಳಿದ್ದೇನೆ ಎಂದು ಹೆಚ್ ವಿಶ್ವನಾಥ್ ಸ್ಪಷ್ಟಪಡಿಸಿದರು. ಯಡಿಯೂರಪ್ಪನವರಲ್ಲಿ ಹಿಂದಿನ ವೇಗ ಈಗ ಇಲ್ಲ. ಪ್ರಭಾವ ಮಬ್ಬಾಗುತ್ತಿದೆ ಅಂತಾ ಹೇಳಿದ್ದೇನೆ. ಹೈಕಮಾಂಡ್ ಯೆಸ್ ಅಂದ್ರೆ ರಾಜೀನಾಮೆಗೆ ನಾನು ಸಿದ್ದ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಆ ಪ್ರಕಾರ ಯಡಿಯೂರಪ್ಪ ಮಾರ್ಗದರ್ಶಕರಾಗಿರಬೇಕು. ಅವರ ಸ್ಥಾನಕ್ಕೆ ಪಂಚಮಸಾಲಿ ಸಮುದಾಯದ ಮುಖಂಡರ ನೇಮಕ ಆದರೆ ಎಲ್ಲರೂ ಸೇರಿ ಕೆಲಸ ಮಾಡಿದರೆ ಬಿಜೆಪಿಗೆ ಭವಿಷ್ಯ ಇದೆ ಅಂತಾ ಹೇಳಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು ಆಡಳಿತದಲ್ಲಿ ಹಸ್ತಕ್ಷೇಪ ಅತಿಯಾಗಿ ಆಗ್ತಿದೆ ಅಂತಾ ಹೇಳಿದ್ದೇನೆ. ಕುಟುಂಬದ ಹಸ್ತಕ್ಷೇಪ, ಭ್ರಷ್ಟಾಚಾರ ಅತಿಯಾಗಿ ಆಗ್ತಿದೆ. ಸರ್ಕಾರದ ಪಕ್ಷದ ಬಗ್ಗೆ ಜನರ ಅಭಿಪ್ರಾಯ ಹೋಗ್ತಿದೆ. ರಾಜ್ಯದಲ್ಲಿ ಮೋದಿ ಅಲೆ ಇಲ್ಲವೇ ಇಲ್ಲ. ರಾಜ್ಯ ಸರ್ಕಾರ ರಾಜ್ಯ ಬಿಜೆಪಿ ಮೋದಿಯವರನ್ನು ಸಂಪೂರ್ಣ ಮರೆತಿದೆ. ಸಿಎಂ ಆಗಿ ನಾಯಕತ್ವ ಮಾಡುವಷ್ಟು ಅವರಲ್ಲಿ ಶಕ್ತಿ ಇಲ್ಲ. ಅವರ ಮಾರ್ಗದರ್ಶನದಲ್ಲಿ ಮತ್ತೊಬ್ಬ ನಾಯಕರನ್ನು ಮಾಡಬೇಕು. ರಾಜ್ಯಕ್ಕೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಅಂತಾ ಹೇಳಿದ್ದೇನೆ ಎಂದೂ ವಿಶ್ವನಾಥ್ ತಿಳಿಸಿದರು. ಯಾವ ದೊಡ್ಡ ದೊಡ್ಡ ಮಠಾಧಿಪತಿಗಳೂ ಸಹ ಬಸವಣ್ಣನ ತತ್ವ ಮೀರಬಾರದು. ಸಿಎಂ ರೇಸ್ ನಲ್ಲಿ ನಾನಿಲ್ಲ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಈಗಾಗಲೇ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅಂತ ಹೇಳಿದ್ದಾರೆ. ನಾನು ಅದನ್ನೇ ಹೇಳಿದ್ದೇನೆ. ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ವಿಶ್ವನಾಥ್ ಹೇಳಿದ್ದಾರೆ.

error: Content is protected !!