ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಲಬುರಗಿ ನಗರದ ಕುಳಗೇರಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ರವಿ ಪೂಜಾರಿ ಹತ್ಯೆಯಾದ ವ್ಯಕ್ತಿ. ಇನ್ನು ಹಳೆ ವೈಷಮ್ಯದ ಹಿನ್ನಲೆಯಲ್ಲಿ ಈ ಹತ್ಯೆ ನಡೆದಿರುವ ಶಂಕೆ ಇದೆ. ತಡರಾತ್ರಿ ಎರಡು ಗಂಟೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ಹಿಂದೆ ಕೊಲೆಯಾದ ರವಿ ಪೂಜಾರಿ ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದ. ನಂತರ ಆಕೆಯನ್ನ ಗರ್ಭಪಾತ ಮಾಡಿಸಲು ಕರೆದುಕೊಂಡು ಹೋಗಿದ್ದ. ಆ ವೇಳೆ ತೀವ್ರ ರಕ್ತಸ್ರಾವ ಆಗಿ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಆರೋಪ ತನ್ನ ಮೇಲೆ ಬರುತ್ತೆ ಅಂತ ಹೈದರಾಬಾದ ಬಳಿ ಮೃತ ಯುವತಿಯನ್ನ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ.
ಈ ಪ್ರಕರಣದಲ್ಲಿ ಜೈಲುಪಾಲಾಗಿ ಕೆಲ ದಿನಗಳ ಹಿಂದೆ ಅಷ್ಟೇ ರವಿ ಪೂಜಾರಿ ಬೇಲ್ ಮೇಲೆ ಹೊರಬಂದಿದ್ದ. ಸಧ್ಯ ಘಟನಾ ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ರವಿ ಪೂಜರಿಯನ್ನು ಬರ್ಭರವಾಗಿ ಹತ್ಯೆಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.