ಬೆಳಗಾವಿ: ಪ್ರಸ್ತುತ ಕೋವಿಡ್ -19 ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳನ್ನು ಆಯೋಜಿಸುವುದನ್ನು ನಿಷೇಧಿಸಿರುವುದರಿಂದ ಈ ಸಾಲಿನ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮನೆಯಲ್ಲಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದ್ದಾರೆ. ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಸೂಚನೆಯಂತೆ 2021 ರ “BE WITH YOGA, BE AT HOME” ಎಂಬ ಘೋಷ ವಾಕ್ಯದೊಂದಿಗೆ ಆರೋಗ್ಯಯುತ ಜೀವನಕ್ಕಾಗಿ, ಸೋಮವಾರ ಮುಂಜಾನೆ 7 ಘಂಟೆಗೆ “ಅಂತರಾಷ್ಟ್ರೀಯ ಯೋಗ ದಿನಾಚರಣೆ” ಯನ್ನು ಆಚರಿಸಲಾಗುವುದು. ಯೋಗ ಪ್ರಾತ್ಯಕ್ಷಿಕೆಯ ಸಾಮಾಜಿಕ ಜಾಲತಾಣದಲ್ಲಿ ಹಾಗೂ ದೃಶ್ಯ ಮಾಧ್ಯಮದಲ್ಲಿ ಅನುಸರಿಸಿಕೊಂಡು “ಮನೆಯಿಂದಲೇ ಯೋಗ” ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ತಿಳಿಸಲಾಗಿದೆ.
ಜೂನ್ 21 ರಂದು ಮನೆಯಿಂದಲೇ ಯೋಗ ಕಾರ್ಯಕ್ರಮವನ್ನು ಯುಟೂಬ್ ಲಿಂಕ್ ಹಾಗೂ ವೆಬ್ಸೈಟ್ ಲಿಂಕ್ ಮುಖಾಂತರ https://youtu.be/P5-M0-wcase
2 ) https://youtu.be/_n3tr9_wPLW
3) https://main.ayush.gov.in/
4) https://yoga.ayush.gov.in/yogal
5) https://www.youtube.com/channel/UCqRR2gs-13zrNcE4so4TpgO
6) https://www.facebook.com/moayush/
7) https://twitter.com/moayush
8) https://www.instagram.com/ministryofayush/?hl=en
9) http://www.yogamdniy.nic.in/
10) http://ccryn.gov.in
11) http://punenin.org/index.htm ಆಚರಿಸುವಂತೆ ಹಾಗೂ ಎಲ್ಲರೂ ಕೋವಿಡ್ -19 ನಂತಹ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.