ಹುಬ್ಬಳ್ಳಿ: ಇಂಡಿಗೋ ವಿಮಾನವೊಂದು ಲ್ಯಾಂಡಿಗ್ ವೇಳೆಯಲ್ಲಿ ಮಾಡಿಕೊಂಡ ಯಡವಟ್ಟಿನಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಪೈಲೆಟ್ನ ಚಾಣಾಕ್ಷತನದಿಂದ ತಪ್ಪಿದ ಘಟನೆ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಣ್ಣೂರಿನಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತಪ್ಪು ಲ್ಯಾಂಡಿಗ್ ಮಾಡಲು ಹೋಗಿ ನೋಸ್ ಟೈರ್ ಆಪ್ ಶೂಟ್ ಆಗಿದೆ. ಪೈಲೆಟ್ನ ಚಾಣಾಕ್ಷತನದಿಂದ ವಿಮಾನದಲ್ಲಿದ್ದ 5 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಣ್ಣೂರುನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವು ಹುಬ್ಬಳ್ಳಿಯಿಂದ 18 ಪ್ರಯಾಣಿಕರನ್ನು ಕರೆದುಕೊಂಡು ಪ್ರಯಾಣ ಬೆಳೆಸಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಲ್ಯಾಂಡಿಗ್ ವೇಳೆಯಲ್ಲಿ ಸುಮಾರು 200 ಮೀಟರ್ ಮುಂದೆ ಬಂದು ಲ್ಯಾಂಡ್ ಆಗಿದೆ. ಈ ವೇಳೆ ನೋಸ್ ಟೈಯರ್ ಶೂಟ್ ಆಪ್ ಆಗಿದೆ. ಘಟನೆಯಿಂದ ಎಚ್ಚತ್ತುಕೊಂಡ ಪೈಲೆಟ್ ಲ್ಯಾಂಡಿಗ್ ಅಗುತ್ತಿದ್ದ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಿ ನಿಧಾನವಾಗಿ ಮತ್ತೇ ವಿಮಾನವನ್ನು ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನೋಸ್ ಟೈಯರ್ ಸ್ಪೋಟಗೊಂಡಿದ್ದರಿಂದ ಮುಂದಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಇದರಿಂದ ಹುಬ್ಬಳ್ಳಿಯಿಂದ ತೆರಳುತ್ತಿದ್ದ 18 ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿ, ಮರಳಿ ಹೋಗುವಂತಾಯಿತು.