ಕೂಗು ನಿಮ್ಮದು ಧ್ವನಿ ನಮ್ಮದು

ನೈಟ್ ಕರ್ಫ್ಯೂ ಇದ್ದರೂ ಬೆಳಗಾವಿಯಲ್ಲಿ ಪೊಲೀಸ್ ಸಿಬ್ಬಂದಿಗಳ ಜೊತೆ ಪುಂಡರ್ ಕಿರಿಕ್

ಬೆಳಗಾವಿ: ಕಳೆದ ರಾತ್ರಿ ನಗರದ ದರ್ಬಾರ್ ಗಲ್ಲಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದ ಲೋಕಲ್ ಪುಂಡರಿಗೆ ಬುದ್ದಿವಾದ ಹೇಳಿದ ಮಾರ್ಕೆಟ್ ಪೋಲಿಸ್ ಠಾಣೆ ಪೇದೆಯ ಮೇಲೆ ಲೋಕಲ್ ಪುಂಡರು ಹಲ್ಲೆ ನಡೆಸಿ, ಆವಾಜ್ ಹಾಕಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಮಾರ್ಕೆಟ್ ಠಾಣೆಯ ಹೆಚ್ಚುವರಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪುಂಡರನ್ನ ಚದುರಿಸಿದ್ದಾರೆ. ಇನ್ನೂ ಪೊಲೀಸರ ಜೊತೆಗೆ ವಾಗ್ದಾದ ನಡೆಸಿ ಓರ್ವ ಪೊಲೀಸ್ ಪೇದೆಯ ಕೆನ್ನೆಗೆ ಹೊಡೆದ ಆರೋಪಿ ಸೇರಿದಂತೆ 5 ಜನರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸೆಕ್ಷನ್ 353, 332, 323, 504, 506, 143, 147, 149 ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಉಲ್ಲಂಘನೆ ಸೇರಿದಂತೆ ವಿವಿಧ ಸೆಕ್ಷನಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇನ್ನ ಉಳಿದ ಪುಂಡರ ಪತ್ತೆಗೆ ಬಲೆ ಬೀಸಿದ್ದಾರೆ‌.

error: Content is protected !!