ಕೂಗು ನಿಮ್ಮದು ಧ್ವನಿ ನಮ್ಮದು

ಚಿಕ್ಕೋಡಿ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 10 ಸಾವಿರ ಜನರಿಗೆ ಉಚಿತ ಲಸಿಕೆ: ಶಾಸಕ ಗಣೇಶ್ ಹುಕ್ಕೇರಿ

ಬೆಳಗಾವಿ: ಚಿಕ್ಕೋಡಿ ಪಟ್ಟಣದ ಕೆ.ಎಲ್‌.ಇ ಆಸ್ಪತ್ರೆಯಲ್ಲಿ , ಕೊವಿಶಿಲ್ಡ್ ಲಸಿಕಾ ಅಭಿಯಾನಕ್ಕೆ, ಶಾಸಕ ಗಣೇಶ್ ಹುಕ್ಕೇರಿಯವರು ಚಾಲನೆ ನೀಡಿದರು‌.

ಈ ವೇಳೆ ಮಾತನಾಡಿದ ಶಾಸಕ ಗಣೇಶ್ ಹುಕ್ಕೇರಿ,
ಲಸಿಕೆಯ ಅಗತ್ಯತೆ ಮತ್ತು ಅಭಾವದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ, ಇಂತಹ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆ ವತಿಯಿಂದ 18 ವರ್ಷಕ್ಕೂ ಮೆಲ್ಪಟ್ಟವರಿಗೆ ಚಿಕ್ಕೋಡಿ ಪಟ್ಟಣದಲ್ಲಿ ಲಸಿಕೆ ನೀಡುತ್ತಿರುವುದು ನೀಜಕ್ಕೂ ಅಭಿನಂದನಾರ್ಹ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನೂ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಪ್ರತಿ ಡೋಸ್ ಗೆ 780 ರೂಪಾಯಿ 10 ಸಾವಿರ ಡೋಸ್ ಖರೀದಿ ಮಾಡಲು ತಿರ್ಮಾನಿಸಿದ್ದೂ, ಕ್ಷೇತ್ರದ ಜನರಿಗೆ ಉಚಿತವಾಗಿ ಕೊವಿಶಿಲ್ಡ್ ಲಸಿಕೆಯನ್ನು ನೀಡಲಾಗುವುದು ಎಂದು ಶಾಸಕ ಗಣೇಶ್ ಹುಕ್ಕೇರಿಯವರು ಈ ವೇಳೆ ತಿಳಿಸಿದರು. ಕ್ಷೇತ್ರದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲು ನಾನು ಮತ್ತು ನಾಯಕರಾದ ಪ್ರಕಾಶಣ್ಣಾ ಹುಕ್ಕೇರಿಯವರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೆವೆ, ಆದ್ರೆ ಕೆಲವು ತಾಂತ್ರಿಕ ಕಾರಣಗಳಿಂದ ಕ್ಷೇತ್ರದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ, ಸರ್ಕಾರ ಕೆ.ಎಲ್‌.ಇ ಸಂಸ್ಥೆಗೆ ಕೊಡುತ್ತಿರುವ ಲಸಿಕೆಯಲ್ಲಿ, 10 ಸಾವಿರ ಲಸಿಕೆಯನ್ನು ನಮ್ಮ ಫೌಂಡೇಶನ್ ವತಿಯಿಂದ ಖರೀದಿ ಮಾಡಿ ಜನರಿಗೆ ನೀಡಲು ತಿರ್ಮಾನಿಸಿದ್ದೂ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಲಸಿಕೆ ನೀಡಲು ಸಂಸ್ಥೆ ಒಪ್ಪಿದ್ರೆ ಅದನ್ನೂ ಸಹಿತ ಖರೀದಿ ಮಾಡಿ ಜನರಿಗೆ ನೀಡಲಾಗುವುದು ಎಂದು ಶಾಸಕ ಗಣೇಶ್ ಹುಕ್ಕೇರಿಯವರು ತಿಳಿಸಿದರು. ಈ ವೇಳೆ ಚಿಕ್ಕೋಡಿ ಪುರಸಭೆ ಉಪಾಧ್ಯಕ್ಷ ಸಂಜಯ್ ಕವಟಗಿಮಠ, ಬಿ.ಆರ್.ಪಾಟೀಲ್, ಹಾಗೂ ಭಾತೆ ಸೇರಿದಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.

error: Content is protected !!