ಕೂಗು ನಿಮ್ಮದು ಧ್ವನಿ ನಮ್ಮದು

ರೋಹಿಣಿ ಮರು ನೇಮಕಕ್ಕೆ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್, ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ

ಮೈಸೂರು: IAS ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರು ಡಿಸಿಯಾಗಿ ನೇಮಿಸುವಂತೆ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್ ಆರಂಭವಾಗಿದೆ. ರೋಹಿಣಿ ಸಿಂಧೂರಿ ಪರ ಆನ್ಲೈನ್ ಅಭಿಯಾನ ಕೈಗೊಂಡಿದ್ದಾರೆ. ಶನಿವಾರ ಸಂಜೆ ವೇಳೆಗೆ ಈ ಅಭಿಯಾನ ಆರಂಭವಾಗಿದ್ದು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನರಿಂದ ಸಹಿ ಸಂಗ್ರಹವಾಗಿದೆ. ರೋಹಿಣಿ ಅವರನ್ನು ಮತ್ತೆ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿ ಎಂದು ‘ಚೇಂಜ್ ಆರ್ಗ್’ ಸಂಸ್ಥೆಯಿಂದ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದಕ್ಕೆ ಉತ್ತಮ ಪ್ರಕ್ರಿಯೆ ಸಿಕ್ಕಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಇನ್ನು ಮಾಜಿ ಸಚಿವ ಎ.ಮಂಜು ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಟಿ.ಎಂ. ವಿಜಯಭಾಸ್ಕರ್ ವರದಿಯನ್ನು ಸರ್ಕಾರ ಜಾರಿ ಮಾಡಿದ್ದರೆ. ಭೂ ಅಕ್ರಮವೇ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.ಅಲ್ಲದೇ ಹಾಸನದಲ್ಲಿ ಒಂದೂವರೆ ವರ್ಷ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿದ್ದಾಗ ಒಂದು ಕುಂಟೆ ಒತ್ತುವರಿ ತೆವು ಆಗಲಿಲ್ಲ. ಭೂ ಮಾಫಿಯಾದ ವಿರುದ್ಧ ಮಾತನಾಡುತ್ತಿರುವ ರೋಹಿಣಿ ಸಿಂಧೂರಿ ಅವರು, ಸಂಬಂಧಪಟ್ಟವರ ವಿರುದ್ಧ ಏಕೆ ಎಫ್ಐಆರ್ ದಾಖಲಿಸಲಿಲ್ಲ? ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ. ಹಿರಿಯ ರಾಜಕಾರಣಿಗಳಿಗೆ ಗೌರವ ಕೊಡಲ್ಲ. ಒಬ್ಬ ಶಾಸಕರನ್ನು ಏಕವಚನದಲ್ಲಿ ಮಾತನಾಡಿಸೋದು ತುಂಬಾ ಕೆಟ್ಟ ಬೆಳವಣೆಗೆ. ಈ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

error: Content is protected !!