ಹುಬ್ಬಳ್ಳಿ: ಯಾರಾದ್ರೂ ದೆಹಲಿಗೆ ಹೋಗಿಬಿಟ್ಟರೆ ಭಿನ್ನಮತ ಹೇಗಾಗುತ್ತೆ. ರಾಜ್ಯ ಸರ್ಕಾರ ಎಲ್ಲ ರೀತಿಯಿಂದ ಒಳ್ಳೆ ಕೆಲಸ ಮಾಡ್ತಿದೆ. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡ್ತಿದಾರೆ. ಈ ವಯಸ್ಸಿನಲ್ಲಿಯೂ ಕೋವಿಡನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ಯಡಿಯೂರಪ್ಪರನ್ನ ಬದಲಾಯಿಸೋ ಪ್ರಶ್ನೆಯೇ ಇಲ್ಲ. ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಚರ್ಚೆಯನ್ನು ಯಾರೂ ಹುಟ್ಟು ಹಾಕಬಾರದು. ರಾಜಕಾರಣದಲ್ಲಿ ಬರೀ ಅಧಿಕಾರವೊಂದೇ ಅಂತಿಮವಲ್ಲ. ಅಧಿಕಾರದಲ್ಲಿ ಇರೋರು ವಿಶೇಷವಾಗಿ ಜನರ ಕಣೀರನ್ನು ಒರೆಸೋದನ್ನು ಪ್ರಥಮ ಆದ್ಯತೆಯನ್ನಾಗಿಸಿಕೊಳ್ಳಬೇಕು. ನಾಯಕತ್ವ ಬದಲಾವಣೆ ಚರ್ಚೆಗೆ ಎಲ್ಲರೂ ಪೂರ್ಣ ವಿರಾಮ ಹಾಡಬೇಕು ಎಂದರು. ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅವರೂ ಹೇಳಿದ್ದಾರೆ. ರಾಜ್ಯ ನಾಯಕರಲ್ಲಿ ಯಾವುದೇ ಭಿನ್ನಮತ, ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರೇ ವಿರೋಧ ಪಕ್ಷದವರಾಗಿ ಕೆಲಸ ಮಾಡೋ ಅನಿವಾರ್ಯತೆ ಇದೆ ಅನ್ನೋ ಮಾತನ್ನು ಒಪ್ಪಲ್ಲ. ಈ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆ ಅಷ್ಟೇ ನಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದರು.