ಕೂಗು ನಿಮ್ಮದು ಧ್ವನಿ ನಮ್ಮದು

ಹುಬ್ಬಳ್ಳಿಯಲ್ಲಿ ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ” ಲೋಕಾರ್ಪಣೆ ಮಾಡಿದ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಇಲ್ಲಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಕೇಂದ್ರ ಸಚಿವ ಪ್ರಹ್ಕಾದ ಜೋಶಿ ಪ್ರಸ್ತಾವನೆಯ ಮೇರೆಗೆ ವೇದಾಂತ ಕಂಪನಿಯ ಸಿಎಸ್ಆರ್ ಕಾರ್ಯಚಟುವಟಿಕೆಯ ಅಡಿ 100 ಹಾಸಿಗೆ (80 ಆಕ್ಸಿಜನ್ ಬೆಡ್ + 20 ICU ಬೆಡ್)
ಸಾಮರ್ಥ್ಯದ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ “ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ” ಯನ್ನು ಲೋಕಾರ್ಪಣೆ ಮಾಡಲಾಯಿತು.

ಇಲ್ಲಿ
ವೆಂಟಿಲೇಟರ್
ABG
ECG
Defibrillator
Patient monitoring system
Bpap
Mobile Xray
Dedicated RO plant
Hot & cold water dispensers
Effluent Treatment/normalizing system
ಹಾಗು ಇನ್ನಿತರ ಆಧುನಿಕ ಸೌಲಭ್ಯಗಳಿದ್ದು ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ಲಭ್ಯವಾಗುವುದು.

ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಈ 100 ಆಕ್ಸಿಜನಯುಕ್ತ ಹಾಸಿಗೆಯ ತುರ್ತು
ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿಸಿ ಕೋವಿಡ್ ಆಸ್ಪತ್ರೆಯಾಗಿದ್ದ ಕಿಮ್ಸನ್ನು ಇನ್ನುಳಿದ ಚಿಕೆತ್ಸೆಗೆ (ಕೋರೊನಾ ಹೊರತು ಪಡಿಸಿ) ಸಾರ್ವಜನಿಕರಿಗೆ ಅನಕೂಲ ಮಾಡಬಹುದು. ಇದರಿಂದ 7-8 ಜಿಲ್ಲೆಗಳಿಂದ ಕಿಮ್ಸಗೆ ಬೇರೆ ಬೇರೆ ಖಾಯಿಲೆಗಳಿಗೆ ಸಂಬಂಧಪಟ್ಟಂತೆ ಬರುವ ಜನರಿಗೆ ಅನಕೂಲವಾಗಲಿದೆ. ಅದಲ್ಲದೇ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತಕ್ಕೆ ಈ ಆಸ್ಪತ್ರೆ ಅತ್ಯಂತ ಅನಕೂಲವಾಗಲಿದೆ.
ಕೊರೋನಾ ಸಂಕಷ್ಟ ಸಮಯದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಇಂಥ ಅತ್ಯಮೂಲ್ಯ ಕೊಡುಗೆ ನೀಡಿ ಬೆಂಬಲ ನೀಡಿದ್ದಕ್ಕಾಗಿ ಶ್ರೀ ಅನಿಲ್ ಅಗರವಾಲ್ ಮತ್ತು ವೇದಾಂತ ಕಂಪನಿಗೆ ನಾನು ಧಾರವಾಡ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಹೇಳಬಯಸುತ್ತೇನೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಗದೀಶ ಶೆಟ್ಟರ್, ಶ್ರೀ ಪ್ರದೀಪ್ ಶೆಟ್ಟರ್, ಶ್ರೀ ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ ಶ್ರೀ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಉಪಸ್ಥಿತರಿದ್ದರು.

error: Content is protected !!