ಬೆಳಗಾವಿ: ಇಲ್ಲಿಯ ಜೈನ ಸಮುದಾಯದ ವತಿಯಿಂದ ಆಯೋಜಿಸಿದ್ದ “ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭ”ದಲ್ಲಿ ಭಾಗಿಯಾದ ಸಂಸದೆ ಮಂಗಳಾ ಅಂಗಡಿಯವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಈ ವೇಳೆ ರಕ್ತದಾನ ಮಾಡಿದ್ದ ಒಟ್ಟು 25 ಜನ ರಕ್ತದಾನಿಗಳಿಗೆ ಅಭಿನಂದನೆ ತಿಳಿಸಿದರು.ಇನ್ನೂ ಇದೇ ವೇಳೆ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದರು.ಇನ್ನೂ ಜೈನ ಸಮುದಾಯ ಇಂತಹ ಕಾರ್ಯದಲ್ಲಿ ಸದಾ ಮುಂದೆ ಇದ್ದು, ಕೋವಿಡ್ 19 ನ ಇಂತಹ ಪರಿಸ್ಥಿತಿಯಲ್ಲಿಯೂ ರಕ್ತದಾನ ಶಿಬಿರ ಏರ್ಪಡಿಸಿ, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಜೇಂದ್ರ ಜೈನ್, ಡಾ. ಯಲಬುರ್ಗಿ, ಶ್ರೀ ಉತ್ಸವ್ ಪೋರ್ವಾಲ್, ಶ್ರೀ ಬಾಬುಲಾಲ್ ಶಾ, ಶ್ರೀ ಅನಿಕೇತ, ಶ್ರೀ ವಿಶಾಲ್, ಶ್ರೀ ರಿತೇಶ್ ಹಾಗೂ ಸಮುದಾಯದ ಇತರೆ ಪ್ರಮುಖರು ಉಪಸ್ಥಿತರಿದ್ದರು.