ಕೂಗು ನಿಮ್ಮದು ಧ್ವನಿ ನಮ್ಮದು

ಕೊರೊನಾ ಸಂಕಷ್ಟದಲ್ಲಿ ಕಾಣಿಸಿಕೊಳ್ಳದ ಶಾಸಕ ಮಹೇಶ್ ಕುಮಠಳ್ಳಿ ಇಂದು ಪ್ರತ್ಯಕ್ಷ

ಅಥಣಿ: ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮೇಲೆ ಕ್ಷೇತ್ರದ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಶಾಸಕರ ನಾಪತ್ತೆ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಶಾಸಕ ಮಹೇಶ್ ಕುಮಠಳ್ಳಿ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕೋವಿಡ್-19 ಗೆ ಸಂಬಂಧಿಸಿದಂತೆ ಇಂದು ಅಥಣಿ ತಾಲೂಕು ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕ ಮಹೇಶ್ ಕುಮಠಳ್ಳಿ ಕ್ಷೇತ್ರ ತೋರೆದಿರುವ ವಿಚಾರಕ್ಕೆ ಅಥಣಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಶಾಸಕ ಮಹೇಶ್ ಕುನಠಳ್ಳಿ ಕ್ಷೇತ್ರಕ್ಕೆ ವಾಪಸ್ಸಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೊಂಕಿನ ಪ್ರಮಾಣ ಹೇಗಿದೆ ಎಂಬುದರ ಮಾಹಿತಿ ಪಡೆದ ಶಾಸಕರು ತಕ್ಷಣ ಹಳ್ಳಿಗಳಲ್ಲಿ ಕೋವಿಡ್ ಕೇರ್ ಸೆಂಟರ ಆರಂಭ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು ನನ್ನ ಆರೋಗ್ಯದಲ್ಲಿ ಏರುಪೇರು ಉಂಟಾದ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದೆ. ಸದ್ಯ ಕೊಂಚ ಮಟ್ಟಿಗೆ ಚೇತರಿಕೆ ಕಂಡಿದ್ದೇನೆ. ಕ್ಷೇತ್ರದಲ್ಲಿರದ ಕಾರಣ ಯಾರು ಅನ್ಯತಾ ಭಾವಿಸಬಾರದು ಎಂದರು. ಇನ್ನೂ ಲಾಕ್ ಡೌನ್ ನಿಂದಾಗಿ ಕೊರೋನಾ ಕಂಟ್ರೋಲ್ ಗೆ ಬಂದಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೊಮ್ ಐಸೋಲೆಷನ್ ಲ್ಲಿದ್ದ ಸೊಂಕಿತರನ್ನ ಕೊವಿಡ್ ಕೇರ್ ಸೆಂಟರಗೆ ಕರೆತರುವಂತೆ ಪ್ರಯತ್ನ ಮಾಡಬೇಕೆಂದು ಅಧಿಕಾರಿಗಳ ಸೂಚನೆ ನೀಡಿದ್ದೇನೆ ಎಂದರು

error: Content is protected !!