ಸವದತ್ತಿ: ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಕೋವಿಡ್ ಸೋಂಕಿಗೆ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ ವೈದ್ಯ ಉಚಿತ ಔಷಧಿ ವಿತರಿಸಿದರು. ಕೋವಿಡ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗುತ್ತಿದ್ದಾರೆ ಇನ್ನೂ 2/3 ನೆ ಅಲೆ ಅಬ್ಬರ ಜೋರಾಗಿದೆ. ಸರಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರವಿಂದ್ರ ಯಲಿಗಾರ, ಉಮೇಶ್ ಬಾಳಿ, ಸಿ.ಬಿ.ಬಾಳಿ, ಎಮ್.ಆರ್. ಗೋಪಶೆಟ್ಟಿ , ಡಾ.ಬಸೀರ ಬೈರಕದಾರ, ಮುನವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಡಿ ಟೋಪೋಜಿ, ತಾನಾಜಿ ಮುರಂಕರ, ಇರ್ಫಾನ್ ಸೊಗಲದ, ಮಿರಾಸಾಬ ವಟ್ನಾಳ, ಅಂದಾನೆಪ್ಪ ಗೊಮಾಡಿ, ನಾಗಪ್ಪ ಕಾಮನ್ನವರ, ಕಲ್ಲಪ್ಪ ಕಿತ್ತೂರ ಯಶವಂತ ಯಲಿಗಾರ, ಸಿಂಗಯ್ಯ ಹಿರೇಮಠ ಪಂಚು ಬಾರಕೇರ, ಪ್ರಸಾದ ವೀರಪೈನವರಮಠ, ವೈದಾಧಿಕಾರಿಗಳಾದ ಡಾ.ಎಸ್‌ಎಲ್.ದಂಡಗಿ, ಚಂದ್ರು ಜಂಬರ್ಗಿ, ಸುಭಾಷ್ ಹುಜರತ್ತಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಆನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.