ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಜಿಲ್ಲೆಯ ಈ ಗ್ರಾಮದಲ್ಲಿ ಒಂದೇ ದಿನ 6 ಸಾವು, ಮೇ ತಿಂಗಳಲ್ಲೇ 25 ಅಂಕಿ ದಾಟಿದ ಸಾವಿನ ಸಂಖ್ಯೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ರುದ್ರ ನರ್ತನ ಜೋರಾಗಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇನ್ನು ಕೊರೊನಾ ಪಾಸಿಟಿವ್ ಪ್ರಕರಣಗಳ ಜೊತೆಗೆ ಸಾವಿನ ಸಂಖ್ಯೆಗೇನು ಕಡಿಮೆಯಿಲ್ಲ. ಬೆಳಗಾವಿ ಜಿಲ್ಲೆಯ ಗ್ರಾಮಗಳಲ್ಲಿ ಈ ಮಹಾಮಾರಿಯ ಅಟ್ಟಹಾಸ ಮುಗಿಲು ಮುಟ್ಟಿದೆ. ಹಳ್ಳಿಗಳಲ್ಲಿ ನಿತ್ಯ ಸಾವು-ನೋವುಗಳು ಸಂಭವಿಸುತ್ತಿವೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಿನ್ನೆ ಒಂದೇ ದಿನ 6 ಜನ ಕೊರೊನಾಗೆ ಬಲಿಯಾಗಿದ್ದಾರೆ.

ದುರಂತವೆಂದರೇ ಮೇ ತಿಂಗಳ ಒಂದರಲ್ಲೇ ಸುಮಾರು 25 ಕ್ಕೂ ಹೆಚ್ಚು ಜನರ ಸಾವು ಈ ಗ್ರಾಮದಲ್ಲಿ ಆಗಿದೆ. ಗ್ರಾಮದಲ್ಲಿ ಆಗುತ್ತಿರುವ ಸಾವುಗಳಿಂದ ಕಂಗಾಲಾದ ತುಕ್ಕಾನಟ್ಟಿ ಜನತೆ ದಿಕ್ಕು ತೊಚದಂತಾಗಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ತ ಕಣ್ಮುಚ್ಚಿ ಕುಳಿತಿದೆ. ಈ ಗ್ರಾಮದಲ್ಲಿ ಇಷ್ಟು ಪ್ರಮಾಣದಲ್ಲಿ ಸಾವುಗಳಾದ್ರು, ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಯಾವುದೇ ಟೆಸ್ಟಿಂಗ್ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಮೃತರ ಪ್ರಾಥಮಿಕ ಸಂಪರ್ಕಿತರನ್ನ ಗುರುತಿಸುವ ಕೆಲಸವನ್ನು ಮಾಡದ ಜಿಲ್ಲಾಡಳಿತ, ಇನ್ನಷ್ಟು ಸಾವುಗಳಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ.

ಇದು ಕೇವಲ ತುಕ್ಕಾನಟ್ಟಿ ಗ್ರಾಮದ ಜನರ ಪಾಡಲ್ಲಾ.. ಬದಲಾಗಿ ಬೆಳಗಾವಿ ಜಿಲ್ಲೆಯ ಬಹುತೇಕ ಗ್ರಾಮಗಳು ಇದಕ್ಕೆ ಭಿನ್ನವಾಗಿಲ್ಲ. ಈ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಬೆಳಗಾವಿ ಜಿಲ್ಲೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಮತ್ತಷ್ಟು ಅನಾಹುತಗಳು ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಘನ ಸರಕಾರ.

error: Content is protected !!