ಬೆಳಗಾವಿ: ಕುಡಚಿ ಶಾಸಕ ಪೀ.ರಾಜೀವ್ ಅವರಿಗೆ ಮಾತೃ ವಿಯೋಗವಾಗಿದೆ. ಪಿ.ರಾಜೀವ್ ತಾಯಿ ಶಾಂತಮ್ಮ ಪಾಂಡಪ್ಪಾ ಲಮಾಣಿ (75) ಇಂದು ಇಹಲೋಕ ತ್ಯಜಿಸಿದ್ದಾರೆ. ಕರೊನಾ ಸೋಂಕು ತಗುಲಿ ತಿವೃ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತಾಯಿ ಶಾಂತಮ್ಮ, ಕಳೆದ ಒಂದು ವಾರದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸಾವನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಕ್ಷೇತ್ರದ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಅತೀವ ದುಖಃದಲ್ಲಿ ಮುಳುಗಿದ್ದು, ತಾಯಿಯವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರಿಗೆ ಮತ್ತು ಅವರ ಕುಟುಂಬದ ಸರ್ವರಿಗೂ ನಿಡಲಿ.. ಮೃತ ತಾಯಿಯ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಹಾರೈಸುತ್ತ.. ನಿಮ್ಮ ದುಖಃದಲ್ಲಿ ನಾವು ಭಾಗಿಯಾಗಿದ್ದೇವೆ.
ನ್ಯೂಸ್90 ಕರ್ನಾಟಕ, ಬೆಳಗಾವಿ.