ಕೂಗು ನಿಮ್ಮದು ಧ್ವನಿ ನಮ್ಮದು

ಲಾಕ್ಡೌನ್ ಮುಂದುವರೆಸೋ ಬಗ್ಗೆ ಇಂದು ನಿರ್ಧಾರ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯ ಅಟ್ಟಹಾಸ ಮುಂದುವರೆದಿದೆ. ಲಾಕ್ ಡೌನ್ ಜಾರಿಯಾದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿರುವುದು ಸ್ವಲ್ಪ ಸಮಾಧಾನ ತಂದಿರೋದು ಒಂದುಕಡೆಯಾದರೆ, ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಶೇಕಡಾವಾರು ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ. ಹೀಗಾಗಿ, ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸಿದರೆ ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯಿತಿ ಸಿಇಒಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾವಾರು ಕೊರೊನಾ ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೆ, ಮುಂದಿನ ಸ್ಥಿತಿಗತಿ ಕುರಿತು ಅಧಿಕಾರಿಗಳ ಅಭಿಪ್ರಾಯ ಪಡೆದುಕೊಂಡರು.

ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ತಡೆಗಟ್ಟುವ ಹಿನ್ನಲೆ ಲಾಕ್ ಡೌನ್ ಮುಂದುವರಿಸಬೇಕೆ? ಈ ಬಗ್ಗೆ ಇಂದು ಅಥವಾ ನಾಳೆ ಸಿಎಂ ಯಡಿಯೂರಪ್ಪ ಒಂದು ತೀರ್ಮಾನ ಕೈಗೊಳ್ತಾರೆ. ವಿಶೇಷವಾಗಿ ಈ ವಿಚಾರ ಕ್ಯಾಬಿನೇಟ್ ಮುಂದಿರುವುದರಿಂದ ಅಲ್ಲೇ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಿನ್ನೆ ಸಿಎಂ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆ ನಂತರ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮಾತನಾಡಿದ ಅವರು, ವಿಡಿಯೋ ಕಾನ್ಫರೆನ್ಸ್ ನಂತರ ರಾಜ್ಯಮಟ್ಟದ ಟಾಸ್ಕ್ ಫೋರ್ಸ್ ನವರು ಅಂಕಿ ಅಂಶಗಳನ್ನ ನೀಡ್ತಾರೆ. ಮಂಗಳವಾರ ಅಥವಾ ಬುಧವಾರ ಈ ಬಗ್ಗೆ ಸಿಎಂ ಒಂದು ತೀರ್ಮಾನ ಕೈಗೊಳ್ತಾರೆ ಅಂತ ಹೇಳಿದ್ದಾರೆ.

ಯಾರು ವ್ಯಾಕ್ಸಿನೇಷನ್ ಬಗ್ಗೆ ಮಾತನಾಡ್ತಿದ್ದಾರೆ ಅವರ ನೆಗಟಿವ್ ಮಾಡಿದ್ದರು. ಇದು ಕೂಡ ವ್ಯಾಕ್ಸಿನೇಷನ್ ನಲ್ಲಿ ಹಿಂದೆ ಬೀಳಲು ಸ್ವಲ್ಪ ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಅವರ ಶಿಗ್ಗಾಂವಿ ನಿವಾಸದ ಬಳಿ ಮಾತನಾಡಿದ ಅವರು, ದೊಡ್ಡ ಪ್ರಮಾಣದಲ್ಲಿ ಕೊರೊನಾ ಸ್ಪ್ರೆಡ್ ಆಗ್ತಿದೆ. ಸಚಿವ ಬೊಮ್ಮಾಯಿಯವರ ನಿವಾಸದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದ್ದಾರೆ. ಸಾಧ್ಯವಿರುವಷ್ಟು ಚಿಕಿತ್ಸೆ ಇಲ್ಲೇ ಆಗುವಂತೆ ತೀರ್ಮಾನ ಮಾಡಿದ್ದಾರೆ. ನಾನೂ ಕೂಡ ಹತ್ತು ಕಾನ್ಸೆಂಟ್ರೇಟರ್ ವ್ಯವಸ್ಥೆ ಮಾಡಿದ್ದೇನೆ. ಬೊಮ್ಮಾಯಿಯವರ ಟ್ರಸ್ಟ್ ನಿಂದ ಔಷಧಗಳನ್ನ ಪ್ಯಾಕ್ ಮಾಡಿ ವಿತರಣೆ ಮಾಡ್ತಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಮಂಜೂರಾಗಿದೆ. ಅದು ಸಣ್ಣದಿದೆ. 1500 ಕಿ.ಲೀಟರ್ ಬೇಕು ಅಂದಿದ್ದಾರೆ. ನಾನು ಅದನ್ನ ಯಾವುದಾದ್ರೂ ಕಂಪನಿಯವರ ಜೊತೆ ಮಾತನಾಡಿ ವ್ಯವಸ್ಥೆ ಮಾಡ್ತೇನೆ. ಕೆಲವು ದಿನಗಳ ಸಮಯ ಹಿಡಿದರೂ ಅದನ್ನ ವ್ಯವಸ್ಥೆ ಮಾಡುತ್ತೇವೆ. 2014 ರಲ್ಲಿ ನಾವು ಬಂದ ನಂತರ ದೇಶದಲ್ಲಿ ಆರೋಗ್ಯದ ಬಗ್ಗೆ ಮೂಲ ಸೌಕರ್ಯಗಳ ವ್ಯವಸ್ಥೆ ಬಗ್ಗೆ ಕಾಳಜಿ ವಹಿಸಿದ್ದೇವೆ. ಒಟ್ಟು ಬೇಡಿಕೆ 5700 ಮೆಟ್ರಿಕ್ ಟನ್ ಇತ್ತು. ಇವತ್ತು 17 ರಿಂದ 18 ಸಾವಿರ ಮೆಟ್ರಿಕ್ ಟನ್ಗೆ ತಲುಪಿದೆ. ಪೆಟ್ರೋಲ್, ಡಿಸೈಲ್ ಟ್ಯಾಂಕರ್ ಗಳನ್ನೂ ಆಕ್ಸಿಜನ್ ಟ್ಯಾಂಕರ್ ಗಳನ್ನಾಗಿ ಪರಿವರ್ತನೆ ಮಾಡ್ತಿದ್ದೇವೆ. ಅದಕ್ಕೆ ಸಮಯ ಬೇಕಾಗುತ್ತದೆ. ಕುವೈತ್ ನಿಂದ 75 ಟನ್ ಆಕ್ಸಿಜನ್ ಬಂದಿದೆ. ಅದರಲ್ಲಿ 25 ಟನ್ ಧಾರವಾಡ ಸೇರಿದಂತೆ ವಿವಿಧೆಡೆ ಹಂಚಿಕೆ ಮಾಡಲಾಗ್ತಿದೆ ಎಂದಿದ್ದಾರೆ.

ಇಡೀ ರಾಜ್ಯಕ್ಕೆ ಆಕ್ಸಿಜನ್ ಕೊರತೆ ಆಗದಂತೆ ಪ್ರಯತ್ನ ಮಾಡ್ತಿದ್ದೇವೆ. ಈ ಭಾಗದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಆಕ್ಸಿಜನ್ ಕೊರತೆ ಆಗದಂತೆ ನಾವೆಲ್ಲರೂ ಪ್ರಯತ್ನ ಮಾಡ್ತಿದ್ದೇವೆ. ಇಲ್ಲಿವರೆಗೆ 105 ರೈಲ್ವೆ ಟ್ಯಾಂಕರ್ ಗಳ ಮೂಲಕ ಆಕ್ಸಿಜನ್ ರವಾನಿಸಲಾಗಿದೆ. ವಾಯು ಮಾರ್ಗದ ಮೂಲಕ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಆಕ್ಸಿಜನ್ ಸಪ್ಲೈ ಮಾಡ್ತಿದ್ದೇವೆ. ಇಲ್ಲಿಯವರೆಗೆ 18 ಕೋಟಿ ಜನರಿಗೆ ದೇಶದಲ್ಲಿ ವ್ಯಾಕ್ಸಿನೇಷನ್ ಮಾಡಿದ್ದೇವೆ. ಯಾರು ವ್ಯಾಕ್ಸಿನೇಷನ್ ಬಗ್ಗೆ ಮಾತನಾಡ್ತಿದ್ದಾರೆ ಅವರ ನೆಗಟಿವ್ ಮಾಡಿದ್ದರು. ಇದು ಕೂಡ ವ್ಯಾಕ್ಸಿನೇಷನ್ ನಲ್ಲಿ ಹಿಂದೆ ಬೀಳಲು ಸ್ವಲ್ಪ ಕಾರಣವಾಗಿದೆ. ರೆಮ್ ಡಿಸಿವಿರ್ 1 ಕೋಟಿ 20 ಲಕ್ಷದಷ್ಟು ಉತ್ಪಾದನೆ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

error: Content is protected !!